‘ಮಗನ ಮೇಲಿನ FIR ರದ್ದಾಗುವವರೆಗೂ ಅನ್ನ ನೀರು ಸೇವಿಸಲ್ಲ’

ಉತ್ತರ ಪ್ರದೇಶ: ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಇಪ್ಪತ್ತು ವರ್ಷದ ಯುವಕ ಸುಮಿತ್​ ಕುಮಾರ್​ ಸೇರಿದಂತೆ 27 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಈ ಬಗ್ಗೆ ಸುಮಿತ್​ ಕುಮಾರ್​ ತಂದೆ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕಳೆದ ಮೂರು ದಿನಗಳಿಂದ ಅನ್ನ ನೀರು ಸೇವಿಸಿಲ್ಲ. ನನ್ನ ಮಗನ ಮೇಲಿನ ಎಫ್​ಐಆರ್​​ ರದ್ದು ಪಡಿಸುವವರೆಗೂ ನಾವು ಉಪವಾಸವಿರುತ್ತೇವೆ. ನಾವು ಉಪವಾಸದಿಂದ ಸತ್ತರೂ ಪರವಾಗಿಲ್ಲ. ನನ್ನ ಮಗನ ಮೇಲಿನ ಎಫ್​ಐಆರ್​ ರದ್ದಾಗಬೇಕೆಂದು ಹೇಳಿದ್ದಾರೆ.
‘ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ’
ಮತ್ತೊಂದೆಡೆ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್​​ ಇನ್ಸ್​ಫೆಕ್ಟರ್​ ಸುಬೋಧ್​ ಕುಮಾರ್​ ಪತ್ನಿಯೂ ಪ್ರತಿಕ್ರಿಯಿಸಿದ್ದು, ನನ್ನ ಗಂಡ ಬುಲೆಟ್​​ ಏಟಿನಿಂದ ಸಾವನಪ್ಪಿದ್ದಾರೆಂದು ವರದಿಯಾಗಿದೆ. ಅವರನ್ನ ಕೊಂದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ನನ್ನ ಪತಿ ಪ್ರಾಮಾಣಿಕ, ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಅವರ ಮೇಲೆ ಈಗಾಗಲೇ ಎರಡಕ್ಕೂ ಹೆಚ್ಚು ಬಾರಿ ಗುಂಡಿನ ದಾಳಿ ನಡೆದಿತ್ತು. ಆ ವೇಳೆ ಅವರಿಗೆ ಯಾರು ನ್ಯಾಯ ದೊರಕಿಸಿ ಕೊಟ್ಟಿರಲಿಲ್ಲ. ಇದೀಗ ಅವರ ಪ್ರಾಣವನ್ನೇ ಕೊಲೆಗಡುಕರು ತೆಗೆದಿದ್ದಾರೆ. ನ್ಯಾಯ ಕೊಲೆಪಾತಕರ ಹಾದಿಯನ್ನೇ ಇಡಿದಿದೆ ಅಂತಾ ಸುಬೋಧ್​ ಪತ್ನಿ ತಮ್ಮ ಪತಿಯನ್ನು ನೆನೆದು ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದ್ರು.