ಎಕ್ಸರ್ಸೈಜ್​​ ಮಾಡೋ ನಾಟಕ, ಅತ್ತ ಇತ್ತ ನೋಡಿ ಬಲ್ಬ್​​ ಕದ್ದನಲ್ಲಾ ಖದೀಮ..!

ಚೆನ್ನೈ: ಆಭರಣ ಅಂಗಡಿಗಳಲ್ಲಿ ಅಥವಾ ಬಟ್ಟೆ ಅಂಗಡಿಗಳಲ್ಲಿ ಸಿಬ್ಬಂದಿಯನ್ನ ಯಾಮಾರಿಸಿ ಕಳ್ಳತನ ಮಾಡಿರೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ಖದೀಮ ಎಕ್ಸರ್ಸೈಜ್​ ಮಾಡೋ ರೀತಿ ನಾಟಕ ಮಾಡಿ ಛಾವಣಿಗೆ ಹಾಕಲಾಗಿದ್ದ ಬಲ್ಬ್​​​ ಕದ್ದಿದ್ದಾನೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ ಎನ್ನಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.

ಟಿ- ಶರ್ಟ್​​ ಹಾಗೂ ಪೈಜಾಮಾ ತೊಟ್ಟಿದ್ದ ವ್ಯಕ್ತಿ ನನ್ನನ್ನು ಯಾರೂ ನೋಡ್ತಾಯಿಲ್ಲ ಅಲ್ವಾ ಅನ್ನೋದನ್ನ ಕನ್ಫರ್ಮ್​ ಮಾಡಿಕೊಳ್ಳೋಕೆ ಅತ್ತಿತ್ತ ನೋಡುತ್ತಾ ಎಕ್ಸರ್ಸೈಜ್​ ಮಾಡುವಂತೆ ನಾಟಕ ಮಾಡ್ತಾನೆ. ಆದ್ರೆ ಆತನ ಈ ಕೃತ್ಯವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗ್ತಿದೆ ಅನ್ನೋದು ಆತನಿಗೆ ಗೊತ್ತಾಗಿಲ್ಲ. ರಸ್ತೆಯಲ್ಲಿ ವಾಹನಗಳು ಚಲಿಸುತ್ತಿರೋದನ್ನ ಕಾಣಬಹುದಾಗಿದ್ದು, ಆ ರಸ್ತೆಯಲ್ಲಿ ಜನರ ಓಡಾಟ ಹೆಚ್ಚಿತ್ತು ಅನ್ನೋದು ಇದರಿಂದ ಗೊತ್ತಾಗುತ್ತದೆ.

ವಾಹನ ಬಂದೊಡನೆ ಫಿಟ್​​ನೆಸ್​​ ಫ್ರೀಕ್​​ ಥರ ಸೊಂಟ ಆಡಿಸುತ್ತಾ ಎಕ್ಸರ್ಸೈಜ್​​ ಮಾಡುವಂತೆ ನಾಟಕವಾಡಿದ್ದಾನೆ. ನಂತರ ಅತ್ತ ಇತ್ತ ಯಾರೂ ಇಲ್ಲ…..ಅಂತ ನೋಡನೋಡುತ್ತಲೇ ಕೈ ಮೇಲಕ್ಕೆ ಸ್ಟ್ರೆಚ್​ ಮಾಡಿ ಹೋಲ್ಡರ್​​ನಿಂದ ಬಲ್ಬ್​​ ತೆಗೆದು ತನ್ನ ಜೇಬಿನೊಳಗೆ ಇಟ್ಟುಕೊಂಡು ಎಸ್ಕೇಪ್​ ಆಗ್ತಾನೆ. ಸದ್ಯ ಬಲ್ಬ್​​ ಕಳ್ಳನ ಈ ವಿಡಿಯೋ ನೋಡಿದ ಜನ “ಎಲಾ ಖದೀಮ…!” ಅಂತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv