ಫರ್ಸ್​ನಲ್ಲಿ ಬೆಂಕಿ ಬರುತ್ತಾ? ಸಿಗರೇಟೂ ಹಚ್ಕೊಬಹುದಾ?

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋದನ್ನ ಮೊದಲೇ ಹೇಳುತ್ತಿದ್ದೇವೆ..ಈಗ ಸ್ಟೋರಿಯ ವಿಷ್ಯಕ್ಕೆ ಬಂದರೇ, ಈ ಸುದ್ದಿ ಆಗಿರೋದು ಫಿಫಾ ವಿಶ್ವಕಪ್​ನಲ್ಲಿ. ಸಿಗರೇಟ್​ ಸೇದುವರೆಲ್ಲಾ ಸಾಮಾನ್ಯವಾಗಿ ಲೈಟರ್​ ಅಥವಾ ಮ್ಯಾಚ್​ ಬಾಕ್ಸ್​ ಯೂಸ್​ ಮಾಡ್ತಾರೆ. ಆದ್ರೆ, ಇಲ್ಲೊಬ್ಬ ಬೆಂಕಿ ಉಗುಳುವ ಪರ್ಸ್​ನಲ್ಲಿ ಸಿಗರೇಟ್​ ಹಚ್ಚಿಕೊಂಡು ಸುದ್ದಿಯಾಗಿದ್ದಾನೆ. ಅದು ಹೇಗೆ ಸಾಧ್ಯ ಅಂತೀರಾ? ಈ ವಿಡಿಯೋ ನೋಡಿ.

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನ ಪಂದ್ಯಾಟದ ವೇಳೆ, ಅದೇನ್​ ಟೆನ್ಶನ್​ ಇತ್ತೋ ಏನೋ ವೀಕ್ಷಕ ಮಹಾಶಯ ತನ್ನ ಪರ್ಸ್​ ತೆಗೆದು ಓಪನ್​ ಮಾಡಿದ್ದಾನೆ. ಬಗ್​ ಅಂತಾ ಬೆಂಕಿ ಹತ್ತಿಕೊಂಡಿದೆ. ಅದರಲ್ಲಿ ಈತ ಸಿಗರೇಟ್​ ಹಚ್ಚಿಕೊಂಡಿದ್ದಾನೆ. ಇದು ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಲ್ಲದೆ ಇಂತಹ ಪರ್ಸ್​ ಎಲ್ಲಿ ಸಿಗುತ್ತೆ ಅನ್ನೋ ಹುಡುಕಾಟ ಬಲುಜೋರಾಗಿ ನಡೀತಿದೆಯಂತೆ.