ಮಾಲೀಕನನ್ನೇ ಕೊಂದುಹಾಕ್ತು, ಜಗತ್ತಿನ ಮೋಸ್ಟ್​ ಡೇಂಜರಸ್​​ ಪಕ್ಷಿ!

ಫ್ಲೋರಿಡಾ: ಕಾಸೋವೇರಿ ಎಂಬ ಜಗತ್ತಿನ ಡೆಡ್ಲಿಯಸ್ಟ್​​ ಪಕ್ಷಿ ತನ್ನ ಮಾಲೀಕನನ್ನೇ ಕೊಂದು ಹಾಕಿರೋ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಕಳೆದ ಶುಕ್ರವಾರ ಗೇಯ್ನಸ್​​ವಿಲ್ಲೆಯಲ್ಲಿ ಈ ಪಕ್ಷಿ ತನ್ನ ಉದ್ದವಾದ ಉಗುರುಗಳಿಂದ ದಾಳಿ ಮಾಡಿ ಮಾಲೀಕ ಮಾರ್ವಿನ್​​​ ಹಾಜೋಸ್​​(75) ಅವರ ಪ್ರಾಣ ತೆಗೆದಿದೆ. ಹಾಜೋಸ್​​ ತನ್ನ ತೋಟದಲ್ಲಿ ಪಕ್ಷಿಗಳನ್ನ ಬ್ರೀಡ್​ ಮಾಡುತ್ತಿದ್ದರು. ಇತರೆ ಪಕ್ಷಿಗಳೊಂದಿಗೆ ಕಾಸೋವೇರಿಯನ್ನು ಕೂಡ ಸಾಕುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಇದು ಆಕಸ್ಮಿಕ ಘಟನೆಯಂತೆ ತೋರುತ್ತದೆ. ನನಗೆ ಅನ್ನಿಸೋ ಪ್ರಕಾರ ಆ ವ್ಯಕ್ತಿ ಪಕ್ಷಿಯ ಸಮೀಪ ಇದ್ದಾಗ ಕೆಳಗೆ ಬಿದ್ದಿದ್ದಾರೆ. ಆಗ ಪಕ್ಷಿ ದಾಳಿ ಮಾಡಿದೆ ಎಂದು ಅಧಿಕಾರಿ ಜೆಫ್​​ ಟೇಯ್ಲರ್​ ಹೇಳಿದ್ದಾರೆ. ಪಕ್ಷಿಯ ದಾಳಿಯಿಂದ ಹಾಜೋಸ್​​ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಕಾಸೋವಾರಿಸ್​​ಗಳು ಎಮು ಅಥವಾ ಆಸ್ಟ್ರಿಚ್​ ಪಕ್ಷಿಗಳಂತೆ ಇರುತ್ತವೆ. ಆಸ್ಟ್ರೇಲಿಯಾ ಹಾಗೂ ನ್ಯೂ ಗಿನಿಯಾದಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ. 6 ಅಡಿವರೆಗೆ ಎತ್ತರ ಹಾಗೂ 60 ಕೆಜಿವರೆಗೆ ತೂಕ ಹೊಂದಿರುತ್ತವೆ. ಇವುಗಳ ಮೈಮೇಲೆ ಕಪ್ಪು ಬಣ್ಣದ ಪುಕ್ಕ ಇದ್ರೆ, ತಲೆ ಹಾಗೂ ಕುತ್ತಿಗೆಯ ಭಾಗ ನೀಲಿ ಬಣ್ಣದಿಂದ ಕೂಡಿರುತ್ತದೆ. ಈ ಪಕ್ಷಿಗಳು ಹಾರುವುದಿಲ್ಲ. ಆದ್ರೆ ಈ ಪಕ್ಷಿಯಲ್ಲಿ ತುಂಬಾ ಡೇಂಜರಸ್​​ ಎಂದರೆ ಇದರ ಕಾಲುಗಳು. ಮೂರು ಬೆರಳುಗಳಲ್ಲಿರುವ ಚೂಪಾದ ಉಗುರು, ಅದರಲ್ಲೂ ಮಧ್ಯದಲ್ಲಿರೋ ಉಗುರು ಡ್ರ್ಯಾಗರ್​​ನಷ್ಟೇ ಚೂಪಾಗಿರುತ್ತದೆ. ಇದರಿಂದ ದಾಳಿ ಮಾಡಿದ್ರೆ, ಕೆಲವು ಇಂಚುಗಳಷ್ಟು ಆಳಕ್ಕೆ ಕಟ್​ ಆಗುತ್ತದೆ.

 

 

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv