ಗರ್ಭಿಣಿ ಪತ್ನಿ ನೋಡಲು ಹೋಗ್ತಿದ್ದ ಯುವಕ ಅಪಘಾತದಲ್ಲಿ ದುರ್ಮರಣ

ಯಾದಗಿರಿ: ಶಹಾಪೂರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಐನಾಪೂರ ಕ್ರಾಸ್ ಬಳಿ ನಿನ್ನೆ ರಾತ್ರಿ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ದುರ್ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದಾನೆ. ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಗ್ರಾಮದ ಸಿದ್ದನಗೌಡ ಶಾಂತಗೌಡ ಬಿರಾದಾರ(28) ಮೃತ ದುರ್ದೈವಿ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಸಿದ್ದನಗೌಡ ಬಿರಾದಾರ, ಗರ್ಭಿಣಿ ಪತ್ನಿಯನ್ನು ನೋಡಲು ಪತ್ನಿಯ ತವರೂರಾದ ಯಾಳಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv