ಹೀಗೂ ವಲಸಿಗರನ್ನ ಸಾಗಾಟ ಮಾಡ್ತಾರೆ ನೋಡ್ರಪ್ಪ..!

ಸಾಮಾನ್ಯವಾಗಿ ಕಾರಿನ ಡಿಕ್ಕಿಯಲ್ಲಿ ಜನರನ್ನ ಕದ್ದು ಮುಚ್ಚಿ ಸಾಗಾಟ ಮಾಡಿದ್ದನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಆಸಾಮಿ ಕಾರಿನ ಡ್ಯಾಶ್​ ಬೋರ್ಡ್​ನಲ್ಲಿ ವ್ಯಕ್ತಿಯನ್ನ ಬೇರೊಂದು ದೇಶಕ್ಕೆ ಸಾಗಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಸ್ಪೇನ್​ ದೇಶದಲ್ಲಿ ನಡೆದಿದೆ. ಯುರೋಪ್​ನಿಂದ ವಲಸಿಗರನ್ನ ಸ್ಪೇನ್​ ದೇಶಕ್ಕೆ ಸಾಗಾಟ ಮಾಡುವ ವೇಳೆ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೊರಾಕೊ ಬಳಿಯ ಬೆನಿ-ಎಂಜಾರ್ ಎಂಬ ಚೆಕ್ ​ಪೋಸ್ಟ್​ ಬಳಿ ಪೊಲೀಸರು ನಡೆಸಿದ ಪರೀಶಿಲನೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ದುರಂತ ಅಂದ್ರೆ, ಹಿಂಭಾಗದ ಸೀಟುಗಳಲ್ಲೂ ಇಬ್ಬರನ್ನ ಬಚ್ಚಿಟ್ಟಿದ್ರು ಅಂತ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ, 15 ವರ್ಷದ ಮಹಿಳೆ ಸೇರಿದಂತೆ ಇಬ್ಬರು ಯುವಕರನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ. ಇನ್ನೂ ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv