ಮಾನಸ ಪರ್ವತ ಯಾತ್ರೆಗೆ ಹೋಗಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿ ನಾಪತ್ತೆ

ಚಿಕ್ಕಮಗಳೂರು: ನೇಪಾಳದ ಸಿಮಿಕೋಟ್‌ನಲ್ಲಿ ಸಿಲುಕಿರುವ ರಾಜ್ಯದ 250 ಜನರ ಪೈಕಿ, ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ತರೀಕೆರೆ ತಾಲೂಕಿನ ಬುಕ್ಕಂಬುದಿ ನಿವಾಸಿಯಾದ ದರ್ಶನ್‌, ಜೂನ್‌ 21ಕ್ಕೆ ಬೆಂಗಳೂರಿನಿಂದ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದನು. ಭಾನುವಾರವಷ್ಟೇ ಸಹೋದರ ಪ್ರಶಾಂತ್‌ಗೆ ಕರೆ ಮಾಡಿ, ಮಾನಸ ಪರ್ವತ ಯಾತ್ರೆಗೆ ತೆರಳುವುದಾಗಿ ತಿಳಿಸಿದ್ದಾನೆ. ಆದ್ರೆ, ಸೋಮವಾರದಿಂದ ದರ್ಶನ್‌ ಸಂಪರ್ಕಕ್ಕೆ ಸಿಗದೇ ಇರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv