ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಯುವಕ ಪತ್ತೆ, ಗ್ರಾಮಸ್ಥರಲ್ಲಿ ಆತಂಕ

ಕೋಲಾರ: ಊರಹೊರಗೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಯುವಕನೊಬ್ಬ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕನ್ನಸಂದ್ರ ಗ್ರಾಮದ ಭಾಸ್ಕರ್(20) ಎಂಬಾತ ಊರ ಹೊರಗೆ ಬಹಿರ್ದೆಸೆಗೆ ಹೋದವ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮೊದಲೇ ಮಕ್ಕಳ ಕಳ್ಳರಿದ್ದಾರೆ ಅನ್ನೋ ವದಂತಿಯಿಂದ ಭೀತಿಗೊಳಗಾಗಿದ್ದ ಜನ ಈ ವಿಷಯ ತಿಳಿಯುತ್ತಿದ್ದಂತೆ ದೊಣ್ಣೆಗಳನ್ನು ಹಿಡಿದು ಸ್ಥಳಕ್ಕೆ ಬಂದಿದ್ರು. ದೊಣ್ಣೆ, ಬಡಿಗೆಗಳನ್ನ ಹಿಡಿದು ಸುತ್ತಮುತ್ತ ಹುಡುಕಾಟ ಕೂಡ ನಡೆಸಿದ್ರು. ನಂತರ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ರು. ಸದ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಯುವಕ ಪ್ರಜ್ಞೆ ತಪ್ಪಿ ಬೀಳಲು ಕಾರಣ ಏನು ಅಂತ ಇನ್ನೂ ತಿಳಿದುಬಂದಿಲ್ಲ.