ಯುವಕನ ಮರಣ ಶಾಸನ ಬರೆದ ಚಾರಣ..!

ಡೆಹ್ರಾಡೂನ್: ಚಾರಣಕ್ಕೆಂದು ಹೋಗಿದ್ದ 34 ವರ್ಷದ ಯುವಕ ಪನ್​ಪತಿಯಾ ಹಿಮನದಿಯಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರಾಖಂಡ್​ನ ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು. ಟ್ರೆಕ್ಕಿಂಗ್​ಗೆಂದು ಹೋಗಿದ್ದ 23 ಜನರ ತಂಡದಲ್ಲಿ ಅರುಣ್ ದಾಸ್ ಎಂಬ ಯುವಕ ಬಲಿಯಾಗಿದ್ದರೆ, ಇನ್ನು 20 ಜನರು ಹಿಮಪಾತದಿಂದಾಗಿ ಮಾರ್ಗ ಮಧ್ಯಯೇ ಸಿಲುಕಿದ್ದಾರೆ.

ಅರುಣ್ ದಾಸ್​ ಇಂಡಿಯನ್ ರೇಲ್ವೆಯಲ್ಲಿ ಹಿರಿಯ ಇಂಜನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಇಲಾಖೆಯದ್ದೇ 23 ಜನರ ಯಾತ್ರಾ ಪ್ರಿಯರ ತಂಡವು ಇತ್ತು. ಅದರಲ್ಲಿ 9 ಜನ ಚಾರಣ ಪ್ರಿಯರು, ಪೊರ್ಟರ್ಸ್​ ಹಾಗೂ ಇಬ್ಬರು ಗೈಡ್​ಗಳಿದ್ದರು. ಚಾರಣಕ್ಕೆಂದು ಜೂನ್ 5ರಂದು ಹೊರಟಿದ್ದ ತಂಡ ಅತಿಯಾದ ಹಿಮಪಾತದಿಂದಾಗಿ ಪನ್​ಪಟಿಯಾ ಹಿಮನದಿಯ ನಡುವೆ ಸಿಲುಕಿಕೊಳ್ಳಬೇಕಾಯ್ತು. ಇದೇ ಸಂದರ್ಭದಲ್ಲಿ ಅರುಣ್​ ಸಾವನ್ನಪ್ಪಿದ್ದಾರೆ.

ಅರುಣ್ ಸಾವು ಹೇಗೆ ಸಂಭವಿಸಿತು ಎಂಬ ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರ ಸಹಾಯದೊಂದಿಗೆ ಹಿಮಪಾತದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾಗಿದೆ. ಇನ್ನು ಡೆಹ್ರಾಡೂನ್​ನಿಂದ ವಿಶೇಷ ರಕ್ಷಣಾ ಪಡೆಯೂ ಕೂಡ ಸ್ಥಳಕ್ಕೆ ಬಂದಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv