ಸತತ 3 ಗಂಟೆ ಡೋರ್​ ಬೆಲ್​ ನೆಕ್ಕಿದವನಿಗಾಗಿ ಶೋಧ, ಯಪ್ಪಾ ಹೀಂಗೂ ಇರ್ತಾರಾ..?!

ಕ್ಯಾಲಿಫೋರ್ನಿಯಾ: ಯಾವುದಾದರೂ ಸಿಹಿ ತಿಂಡಿನೋ ಅಥವಾ ತುಂಬಾ ಟೇಸ್ಟಿ ಫುಡ್​ಗಳಾದ್ರೆ ಬಾಯಿ ಚಪ್ಪರಿಸ್ಕೊಂಡು ತಿಂದು ಅದರ ಸವಿಯನ್ನ ನೆಕ್ಕಿ ಚಪ್ಪರಿಸ್ತಾರೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ಮನೆಯೊಂದರ ಬಳಿ ಬಂದ ವ್ಯಕ್ತಿಯೊಬ್ಬ ಅಲ್ಲಿನ ಡೋರ್​ಬೆಲ್​ ಅನ್ನು ನೆಕ್ಕಿದ್ದಾನೆ. ಇದೇನು ಮಹಾ ದೊಡ್ಡ ವಿಷಯ ಅಂದುಕೊಂಡ್ರಾ, ಅವನು ಡೋರ್​ಬೆಲ್​ನ ಒಂದೆರಡು ಕ್ಷಣ ಅಲ್ಲ, ಸತತ ಮೂರು ಗಂಟೆ ಕಾಲ ನೆಕ್ಕಿದ್ದಾನಂತೆ..! ಸಿಲ್ವಿಯಾ ಡುಂಗನ್ ಎಂಬುವವರ ಮನೆಯ ಬಳಿ ಹೋದ ರಾಬರ್ಟೊ ಡೇನಿಯಲ್ ಅರ್ರೋಯೋ ಎಂಬಾತ ಅವರ ಬಾಗಿಲು ಬಳಿ ಇರುವ ಡೋರ್​ಬೆಲ್​ ಅನ್ನು ಒಳ್ಳೆ ಬೆಲ್ಲ ಅನ್ನೋ ಹಾಗೆ ನೆಕ್ಕಿ ನೆಕ್ಕಿ ಹಾಕಿದ್ದಾನೆ. ಅಷ್ಟೇಅಲ್ಲ ಅದಾದ ಮೇಲೆ ಸಿಸಿಟಿವಿ ಹತ್ರ ಬಂದು ಕ್ಯಾಮರಾನ ಗುರಾಯ್ಸಿ ಹೋಗಿದ್ದಾನೆ. ಮನೆಯವರಿಗೆ ಸಿಸಿಟಿವಿಯಿಂದ ನೋಟಿಫಿಕೇಷನ್ ಬಂದು ಸಿಸಿಟಿವಿ ಫುಟೇಜ್ ಚೆಕ್ ಮಾಡ್ದಾಗ ಈ ಭೂಪನ ಕೆಲಸ ಗೊತ್ತಾಗಿದೆ. ಇದರಿಂದ ಗಾಬರಿಯಾಗಿರೋ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಡೆನಿಯಲ್ ಹುಡುಕೋಕೆ ಶುರುಮಾಡಿರೋ ಪೊಲೀಸ್ರು ಯಾಕಪ್ಪಾ ಹೀಗ್ ಮಾಡ್ದೇ ಅಂಥಂದ್ದೇನಿತ್ತಪ್ಪ ಆ ಡೋರ್​ಬೆಲ್​ನಲ್ಲಿ ಇತ್ತು?  ಅಂತಾ ಕೇಳೋಕೆ ಕಾಯ್ತಾಯಿದ್ದಾರೆ.