ಕಾರಿನಲ್ಲಿ ಯುವಕ ಯುವತಿ ಅನುಮಾನಾಸ್ಪದ ಸಾವು

ಬೆಂಗಳೂರು: ಇಲ್ಲಿನ ಐಟಿಐ ಲೇಔಟ್​ನಲ್ಲಿ ಯುವಕ-ಯುವತಿಯ ಜೋಡಿ ಸಾವು ಸಂಭವಿಸಿದೆ. ಇವರಿಬ್ಬರೂ ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್​ಪೆಕ್ಟರ್​​ ಮಂಜು ನೇತೃತ್ವದಲ್ಲಿ ತನಿಖೆ ನಡೆದಿದೆ.

ಭಾವನ ಮತ್ತು ಹೇಮಂತ್​ ಮೃತರು. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಯಾವ ಕಾರಣಕ್ಕಾಗಿ ಸಾವಿಗೀಡಾಗಿದ್ದಾರೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಯುವತಿ ಡೈವೊರ್ಸಿಯಾಗಿದ್ದು, ಯುವಕ ಕಾರ್​ ಡೀಲರ್​ ಆಗಿದ್ದನೆಂದು ತಿಳಿದುಬಂದಿದೆ. ಫೋರೆನ್ಸಿಕ್​ ವರದಿ ಬಂದ ನಂತರ, ವಿವರ ತಿಳಿಯಲಿದೆ ಎಂದು ಇನ್ಸ್​ಪೆಕ್ಟರ್​​ ಮಂಜು ಹೇಳಿದ್ದಾರೆ. 2 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐಟಿಐ ಲೇಔಟ್​ನ ಶೆ​ಡ್​ ಒಂದರಲ್ಲಿ ಇನ್ನೋವಾ ಕಾರಿನಲ್ಲಿ ಕುಳಿತಿದ್ದ ವೇಳೆ ಅನುಮಾನಾಸ್ಪದವಾಗಿ ಇವರು ಸಾವಿಗೀಡಾಗಿದ್ದಾರೆ. ಮೇಲ್ನೋಟಕ್ಕೆ, ಆಮ್ಲಜನಕ ಕೊರತೆಯಿಂದಾಗಿ ಸತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv