‘ಪ್ರಜಾಪ್ರಭುತ್ವ ಸಂವಿಧಾನ ಬದ್ಧವಾಗಿ ನಡೆಯಬೇಕಾದರೆ ಎಲ್ಲರೂ ವೋಟ್​ ಮಾಡಿ’

ಕಲಬುರ್ಗಿ: ಸರ್ಕಾರ ಪ್ರಜಾಪ್ರಭುತ್ವ ಸಂವಿಧಾನಬದ್ಧವಾಗಿ ನಡೆಯಬೇಕಾದರೆ ನಾವೆಲ್ಲರೂ ಮತದಾನ ಮಾಡಬೇಕು ಎಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಮತದಾನ ಮಾಡಿದ ಬಳಿ ಮಾತನಾಡಿದ  ಅವರು, ನಾನು ನಮ್ಮ ಮನೆಯವರ ಜೊತೆ ಬಂದು ಮತ ಚಲಾಯಿಸಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ  ಜನ ಬಂದು ತಮ್ಮ ಇಚ್ಚೆಯ ಅಭ್ಯರ್ಥಿಗೆ ಮತ ಹಾಕಬೇಕೆಂದು ಮನವಿ ಮಾಡುವೆ. ಈಗಾಗಲೇ ಕಲಬುರ್ಗಿ ಲೋಕಸಭಾ ಕ್ಷೇತ್ರದ 7 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಏಜೆಂಟರ ಜೊತೆ ಸಂಪರ್ಕದಲ್ಲಿದ್ದೇನೆ. ಸ್ವಯಂಪ್ರೇರಿತವಾಗಿ ಬೇರೆ ಊರುಗಳಲ್ಲಿದ್ದ ಮತದಾರರು ಬಂದು ಮತ ಹಾಕುತ್ತಿದ್ದಾರೆ. ಅನೇಕ ಕಡೆ ಇವಿಎಂ ಕೈ‌ ಕೊಟ್ಟಿದ್ದು ಸರಿಪಡಿಸಲಾಗಿತ್ತಿದೆ ಈ ಬಗ್ಗೆ ಡಿಸಿ ಜೊತೆ ಮಾತನಾಡಿದ್ದೇನೆ.ಒಟ್ಟಾರೆ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿದೆ. ಇಲ್ಲಿ ಸಂತೋಷ ಪಡುವಂತಹ ವಾತಾವರಣ ನಿರ್ಮಾಣವಾಗಿದೆ, ಮೇ 23ರಂದು ಫಲಿತಾಂಶದಂದು ಗೊತ್ತಾಗುತ್ತೆ. ಪೇಪರ್ ಚೆನ್ನಾಗಿ ಬರೆದ ಮೇಲೆ ರಿಸಲ್ಟ್ ಚೆನ್ನಾಗಿ ಬರಬೇಕಲ್ಲ. ನಾನು ಪೇಪರ್ ಚೆನ್ನಾಗಿ ಬರೆದಿದ್ದೇನೆ, ಎಲ್ಲಾ ಪ್ರಶ್ನೆಗಳನ್ನು ಬಿಡಿಸಿದ್ದೇನೆ. ಅದಕ್ಕೆ ಉತ್ತರ ಚೆನ್ನಾಗಿ ಬಂದ ಮೇಲೆ ಮಾರ್ಕ್ಸ್ ಚೆನ್ನಾಗಿ ಬರ್ತದೆ. ಮೇ 23ರಂದು ಬರುವ ಫಲಿತಾಂಶದಲ್ಲಿ ಬಹುಮತದಿಂದ ನಾನು ಕ್ಷೇತ್ರದಿಂದ ಆರಿಸಿ ಬರುವ ವಿಶ್ವಾಸವಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv