ಪದೇ ಪದೇ ದಲಿತ ಸಿಎಂ ಎಂದು ಹೇಳಿ ನನಗೆ ಅಪಮಾನ ಮಾಡಬೇಡಿ‌ -ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ: ಪದೇ ಪದೇ ದಲಿತ ಸಿಎಂ ಹೇಳಿ ನನಗೆ ಅಪಮಾನ ಮಾಡಬೇಡಿ‌. ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಬರುತ್ತವೆ. ನಂತರ ನಾನು ಈ ಬಗ್ಗೆ ಕೇಳಲ್ಲ, ಅವರು ಈ ಬಗ್ಗೆ ಹೇಳಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಖರ್ಗೆ ಸಿಎಂ ಆಗಬೇಕಿತ್ತು ಅನ್ನೋ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪದೇ ಪದೇ ದಲಿತ ಸಿಎಂ ಹೇಳಿ ನನಗೆ ಅಪಮಾನ ಮಾಡಬೇಡಿ‌ ಎಂದು ಹೇಳಿದ್ದಾರೆ.

ಅಲ್ಲದೇ. ಕುಂದಗೋಳ, ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಅಂತಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬಿಜೆಪಿಯವರು ಮಾತಿನ ಮಲ್ಲರು. ಕೇವಲ ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಜಾಧವ್‌ನ ರಾಜಕೀಯಕ್ಕೆ ಕರೆತಂದಿದ್ದು ನಾನು ಹಾಗೂ ಧರ್ಮಸಿಂಗ್‌. ಆದ್ರೀಗ ನನ್ನನ್ನು ಸೋಲಿಸು ಅಂತಾ ಮೋದಿ ಸೇರಿದಂತೆ  ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ. ನಾನು ಸಂಸತ್ತಿನಲ್ಲಿ ಬೇರೆಯವರ ತರಹ ನಿದ್ರೆ ಮಾಡಿಲ್ಲ. ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂದಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv