ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡುತ್ತಿದ್ದೇವೆ: ಮಾಳವಿಕಾ

ದಾವಣಗೆರೆ: ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಶ್ರಮವಹಿಸಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ. ಲೋಕಸಭಾ ಚುಣಾವಣೆಗೆ ಬಿಜೆಪಿ ಎಲ್ಲ ಸಿದ್ಧತೆ ಮಾಡುತ್ತಿದ್ದೆೇವೆ. ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಬಿಜೆಪಿ ವಕ್ತಾರೆ ಮಾಳವಿಕಾ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಇನ್ನು ಐದು ಕ್ಷೇತ್ರದ ಅಭ್ಯರ್ಥಿಗಳು ಹೆಸರು ಪ್ರಕಟವಾಗಲಿದೆ. ಮೋದಿ ಸರ್ಕಾರ ಪಾರದರ್ಶಕ ಆಡಳಿತ ನೀಡಿದೆ. ಸುಳ್ಳು ಹೇಳುವುದು ರಾಹುಲ್ ಚಾಳಿಯಾಗಿದೆ ಎಂದರು.

ಇನ್ ಕಮ್ ಟ್ಯಾಕ್ಸ್‌ ನವರು ಡೈರಿ ಪುಟಗಳು ಫೋರ್ಜರಿ ಎಂದು ಹೇಳಿದ್ದಾರೆ. ರಣದೀಪ್ ಸುರ್ಜೆವಾಲಾ ಸುಳ್ಳು ಆರೋಪ ಮಾಡ್ತಿದಾರೆ. ದಾರಿ ತಪ್ಪಿಸುತ್ತಿದ್ದಾರೆ. ಅವರನ್ನು ಬಂಧಿಸಬೇಕು. ನಮ್ಮ ನಿಯೋಗ ಚುಣಾವಣೆ ನಿಯೋಗಕ್ಕೆ ತೆರಳಿದ್ದೇವೆ. ದೂರು ದಾಖಲಿಸಲಿದ್ದೇವೆ. ಚುಣಾವಣೆಗೋಸ್ಕರ ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುತ್ತದೆ. ಡಿಕೆ ಶಿವಕುಮಾರ್ ಅವರ ಕೊಟ್ಯಂತರ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ತೆರಿಗೆ ಇಲಾಖೆಯವರು ಡಿಕೆ ಶಿವಕುಮಾರ್‌ಗೆ 75 ಕೋಟಿ ರೂ. ಅಕ್ರಮ ಆಸ್ತಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಸಿಎಂ ಕುಮಾರಸ್ವಾಮಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎದುರು ನೋಡುತ್ತಿದ್ದೇವೆ. ಡಿಕೆ ಶಿವಕುಮಾರ್‌ ಅವರನ್ನು ಮಂತ್ರಿಮಂಡಲದಿಂಡ ಕೈ ಬಿಡಬೇಕೆಂದು ಆಗ್ರಹಿಸಿದ್ದೇವೆ ಎಂದು ಮಾಳವಿಕಾ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv