ಬಿಜೆಪಿಗೆ ನೇಷನ್ ಫಸ್ಟ್‌, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಫಸ್ಟ್ : ಮಾಳವಿಕಾ

ಚಿತ್ರದುರ್ಗ: ಬಿಜೆಪಿಗೆ ನೇಷನ್ ಫಸ್ಟ್‌ ಆದ್ರೆ, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಫಸ್ಟ್ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಲವತ್ತು ವರ್ಷಗಳಿಂದಲೂ ಗರೀಬಿ ಹಟಾವೋ ಎನ್ನುತ್ತಿದೆ ಕಾಂಗ್ರೆಸ್. ರಾಜ್ಯದಲ್ಲಿ ಮಂಡ್ಯ ಬಿಟ್ಟು ಬೇರೆಲ್ಲೂ ಚುನಾವಣೆ ನಡೆಯುತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ, ಸಿಎಂ, ಸಚಿವರು ಸೇರಿದಂತೆ ಹಲವಾರು ಜನ ಒಂದೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ನಾಡಿನ ಮುಖ್ಯಮಂತ್ರಿ ಆಗುವ ಬದಲು ನಿಖಿಲ್ ತಂದೆಯಾಗಿದ್ದಾರೆ. ಮೈತ್ರಿ ಪಕ್ಷಗಳ ನಡುವೆ ಗೊಂದಲಮಯ ವಾತಾವರಣ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ  ಱಲಿಗಳು ಬಿಜೆಪಿಗೆ ಶಕ್ತಿ ತುಂಬಿವೆ ಎಂದು ಮಾಳವಿಕಾ ತಿಳಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv