45ರ ಹರೆಯದಲ್ಲೂ ಫಿಟ್​ ಅ್ಯಂಡ್ ಫೈನ್ ಆಗಿದ್ದಾರೆ ಮಲೈಕಾ ಅರೋರಾ

ನಟಿ ಮಲೈಕಾರ ಅರೋರ ಅವರು 45ರ ಹರೆಯದಲ್ಲೂ ಫಿಟ್​ ಅ್ಯಂಡ್ ಫೈನ್​ ಅನ್ನೂ ಹಾಗೆ ತಮ್ಮ ಫಿಟನೆಸ್​ ಕಾಪಾಡಿಕೊಂಡಿದ್ದಾರೆ. ಅವರು ತಮ್ಮ ಬ್ಯೂಸಿ ಶೆಡ್ಯೂಲ್​ ನಡುವೆಯೂ ಜಿಮ್​ನಲ್ಲಿ ಬೆವರಿಳಿಸಿ ಹದಿಹರೆಯದ ಹುಡಿಗಿಯರೂ ನಾಚುವಂತೆ ಫಿಟ್​ನೆಸ್​ ಕಾಪಾಡಿಕೊಂಡಿದ್ದಾರೆ. ಬಹುತೇಕ ನಟಿಯರು ತಮಗೆ ವಯಸ್ಸಾದಂತೆ ತಮ್ಮ ಫಿಟ್​ನೆಸ್​ ಕಳೆದುಕೊಳ್ಳುತ್ತಾರೆ. ಆದ್ರೆ ನಟಿ ಮಲೈಕಾ ಫಿಟ್​ನೆಸ್​ ಉತ್ಸಾಹಿ. ಹೀಗಾಗಿ ಅವರು ಇತ್ತೀಚಿಗೆ ತಮ್ಮದೆ ಒಂದು ಯೋಗ ಸ್ಟುಡಿಯೋವೊಂದನ್ನ ಆರಂಭಿಸಿದ್ದಾರೆ.

ನಟಿ ಮಲೈಕಾ ಆಗಾಗ ಫಿಟ್​ನೆಸ್​ ವಿಡಿಯೋಗಳನ್ನ ಇನ್​ಸ್ಟಾಗ್ರಾಮ್​ ಅಕೌಂಟನಲ್ಲಿ ಹಂಚಿಕೊಳ್ಳುತ್ತಾರೆ. ಅವರು ಅಚ್ಚು ಮೆಚ್ಚಿನ ಫಿಟ್​ನೆಸ್​ ವರ್ಕ್ಔಟ್​ ಎಕ್ಸರ್ಸೈಸ್​( ಪೈಲೇಟ್ಸ್​ ವ್ಯಾಯಾಮ) ಇದು ನಮ್ಮ ದೇಹಕ್ಕೆ ಫುಲ್​ ವರ್ಕ್ಔಟ್​ ಹಾಗೂ ದೇಹದ ಸದೃಡತೆ ಕಾಪಾಡಿಕೊಳ್ಳಲು ಉಪಕಾರಿ. ಅಲ್ಲದೆ ಇದು ನಮ್ಮ ಮಾಂಸ ಖಂಡಗಳನ್ನ ಹುರಿಗೊಳಿಸುತ್ತದೆ. ಜೊತೆಗೆ ನಮ್ಮ ಚಯಾಪಚಯ ಕ್ರಿಯೆಯನ್ನ ಸಮತೋಲನಗೊಳಿಸುತ್ತೆ.

ನೀವು ನಿಮ್ಮ ಹೃದಯ ಆರೋಗ್ಯವಾಗಿರಬೇಕು ಅಂತಾ ನೀವು  ಬಯಸಿದರೆ ಸಮತೋಲಿತವಾಗಿ, ನೀವು ದೈನಂದಿನ ಕಾರ್ಡಿಯೋ ಎಕ್ಸರ್ಸೈಸ್ ಜೊತೆಗೆ (ವಾಕಿಂಗ್, ಸೈಕ್ಲಿಂಗ್ ಅಥವಾ ಜಾಗಿಂಗ್) ಮಾಡಬೇಕು. ವ್ಯಾಯಾಮದ ಅಭ್ಯಾಸವಾಗಿ ಹೃದಯದ ಆರೋಗ್ಯವನ್ನ ಸುಧಾರಿಸಲು ಪೈಲೇಟ್​ ವ್ಯಾಯಾಮ ಪ್ರಯೋಜನಕಾರಿಯಾಗಬಹುದು.

ನಟಿ ಮಲೈಕಾ ಇತ್ತೀಚಿಗೆ ತಾವು ಪೈಲೇಟ್ಸ್ ವ್ಯಾಯಾಮ ಮಾಡುತ್ತಿದ್ದ ವಿಡಿಯೋವೊಂದನ್ನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.   ಆ ವಿಡಿಯೋದಲ್ಲಿ ಅವರು ಬೋಧಿ ಪೈಲೇಟ್ಸ್ ಮಾಡುತ್ತಿದ್ದರು. ಇದು ನಮ್ಮ ದೇಹದ ಶಕ್ತಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಮತ್ತು ದೇಹದ ಸಮತೋಲನವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಬೋಧಿ ಪೈಲೇಟ್ಸ್ ನಿಮ್ಮ ದೇಹದ ಭಂಗಿಗಳ ಜೋಡಣೆಗೆ ಸಹಕಾರಿಯಾಗುತ್ತದೆ ಮತ್ತು ನಿಮಗೆ ನಿಮ್ಮ ದೇಹದ ಮೇಲಿರುವ ಜಾಗೃತಿಯನ್ನು ಹೆಚ್ಚಿಸುತ್ತದೆ, ಅದೇ ಸಮಯದಲ್ಲಿ ನಿಮ್ಮ  ಸ್ಟೆಮಿನಾ ಮತ್ತು ಫ್ಲೆಕ್ಸಿಬಿಲಿಟಿಯನ್ನ ಸುಧಾರಿಸುತ್ತದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv