ಗೋವಿಗೆ ‘ರಾಷ್ಟ್ರ ಮಾತೆ’ ಸ್ಥಾನಮಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ

ಗೋವಿಗೆ ರಾಷ್ಟ್ರ ಮಾತೆ ಸ್ಥಾನಮಾನ ನೀಡುವ ನಿರ್ಣಯವನ್ನು ಉತ್ತರಾಖಂಡ್ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಬುಧವಾರದ ವಿಧಾನಸಭೆ ಅಧಿವೇಶನದಲ್ಲಿ ಪಶುಸಂಗೋಪನೆ ಸಚಿವೆ ರೇಖಾ ಆರ್ಯ ಅವರು, ಈ ಕುರಿತಾದ ನಿರ್ಣಯವನ್ನು ಪ್ರಸ್ತಾಪಿಸಿದರು. ರಾಷ್ಟ್ರದಲ್ಲೇ ಗೋ ಹತ್ಯೆ ನಿಷೇಧಿಸಬೇಕು. ಇದು ನಮ್ಮ ಕಳಕಳಿ ಅಂತಾ ಹೇಳಿದರು. ಇದಕ್ಕೆ ಉತ್ತರಖಾಂಡ್​ ಕಾಂಗ್ರೆಸ್​ ಮುಖ್ಯಸ್ಥ ಪ್ರೀತಮ್ ಸಿಂಗ್ ಕೂಡ ಬೆಂಬಲ ವ್ಯಕ್ತಪಡಿಸಿದರು. ಆದರೆ ಪ್ರತಿಪಕ್ಷ ನಾಯಕಿ ಇಂದಿರಾ ಹೃದಯೇಶ್ ಅವರು, ಗೋವಿಗೆ ರಾಷ್ಟ್ರ ಮಾತೆ ಸ್ಥಾನಮಾನ ನೀಡುತ್ತಿರುವ ಉದ್ದೇಶವೇನು? ಅಂತಾ ಪ್ರಶ್ನಿಸಿದರು. ನಂತರ ಹಲವು ಚರ್ಚೆಗಳ ಬಳಿಕ ಗೋವಿಗೆ ರಾಷ್ಟ್ರ ಮಾತೆ ಸ್ಥಾನ ನೀಡುವ ನಿರ್ಣಯವನ್ನ ಅಂಗೀಕರಿಸಲಾಯಿತು.