ಕೋಳಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ..!

ಪುಣೆ: ಕೆಟ್ಟೊಯ್ತಪ್ಪ.. ಕೆಟ್ಟೊಯ್ತಪ್ಪ.. ಕಾಲ ಕೆಟ್ಟೊಯ್ತಪ್ಪ..! ಅಂತಾ ಜನ ಆಗಾಗ ಉದ್ಘಾರ ತೆಗೀತಿರ್ತಾರೆ. ಆದ್ರೆ, ಕೆಟ್ಟೋಗಿದ್ದು ಕಾಲಾನಾ? ಜನನಾ? ಅನ್ನೋದು ಕೂಡ ಕೆಲವರ ಪ್ರಶ್ನೆ.

ಯಾಕೆ ಹೀಗೆಲ್ಲಾ ಹೇಳ್ತಿದ್ದೀವಿ ಅಂದ್ರೆ, ಹಿಂದೊಂದು ಕಾಲ ಇತ್ತು. ಹಳ್ಳಿಗಾಡುಗಳಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಕಾಡು ಕೋಳಿಗಳು ಕೂಗುತ್ತಿದ್ದವು. ಇದರ ಅರ್ಥ ಬೆಳ್ಳಿ ಮೂಡಿ ಬೆಳಗಾಗುತ್ತಿದೆ ಎಂದು ಹಳ್ಳಿಗರು ನಂಬಿದ್ದರು, ಅದು ಸತ್ಯ ಕೂಡ ಹೌದು. ಕಾಡುಕೋಳಿಗಳು ಕೂಗಿದ ನಂತರ ಊರ ಕೋಳಿಗಳು, ಸುತ್ತಮುತ್ತ ಇರುವ ಹಕ್ಕಿಗಳೂ ಸಹ ಕೂಗಿ ಬೆಳಕಾಗುತ್ತಿದೆ ಅಂತಾ ಸಂಭ್ರಮ ಪಡುತ್ತಿದ್ದರು. ಮುಸುಕು ಸರಿದು ಬೆಳಗಾಗುತ್ತಿದ್ದಂತೆ ಹಕ್ಕಿ-ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತ ಗೂಡು ಬಿಟ್ಟ ಮೇಲೆಯೇ ಮನುಷ್ಯರಾದ ನಾವು, ವಹೋ..! ಬೆಳಗಾಯ್ತು..! ಅಂತಾ ಏಳ್ತಿದ್ವಿ. ಈಗ ಕೆಲವೇ ಕೆಲವು ಹಳ್ಳಿಗಳನ್ನ ಬಿಟ್ಟರೆ ಅಂತಹ ವಾತಾವರಣ ಬಹುತೇಕ ಕಡಿಮೆಯಾಗಿದೆ ಅನ್ನೋ ಕೂಗಿನ ಮಧ್ಯೆ, ವಿಪರ್ಯಾಸ ಎನ್ನುವಂತೆ ಕೋಳಿ ಒಂದರ ವಿರುದ್ಧ ಮಹಿಳೆ ಒಬ್ಬರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ!

ಹೌದು, ಬೆಳ್ಳಂಬೆಳಗ್ಗೆ ಕೋಳಿ ಕೂಗುವುದರಿಂದ ತೊಂದರೆ ಆಗ್ತಿದೆ ಅಂತಾ ಆರೋಪಿಸಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಹಿಳೆ ಒಬ್ಬರು ಸಮರ್ಥ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೋಮವಾರ್​​ ಪೇಟ್​ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಕೋಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಮಹಿಳೆ ಮಲಗಿರುವಾಗ ಪ್ರತಿದಿನ ತನ್ನ ಮನೆ ಹತ್ತಿರ ಬಂದು ಕೋಳಿ ಕೂಗಲು ಆರಂಭಿಸುತ್ತೆ. ಇದರಿಂದ ಮಹಿಳೆಗೆ ತುಂಬಾ ತೊಂದರೆ ಅನುಭವಿಸಲಾಗುತ್ತಿದೆ ಅಂತಾ ಪ್ರಕರಣ ದಾಖಲಿಸಿದ್ದಾರೆ.

ಕೋಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಿಳೆ ಒತ್ತಾಯ ಮಾಡಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಕೋಳಿ ಮತ್ತು ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕೃತಿ ನಿಯಮದಂತೆ ಹಕ್ಕಿ-ಪಕ್ಷಗಳು ಬದುಕುತ್ತಿವೆ. ಇದರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರೋದು ಸರಿಯಲ್ಲ ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv