ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 4ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ಚಾಲನೆ ದೂರೆತಿದೆ.  ಬಾಹುಬಲಿ ವಿರಾಜಮಾನನಾಗಿ ನಿಂತಿರುವ ರತ್ನಗಿರಿ ಬೆಟ್ಟದಲ್ಲಿ ಬೆಳಗ್ಗೆ 8.45ಕ್ಕೆ ತೋರಣ ಮುಹೂರ್ತದ ಮೂಲಕ‌ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಜೈನ ಮುನಿಗಳು ಹಾಗೂ ಸಾಧು ಸಂತರು  ಹಾಜರಿದ್ದರು. ಚಂದ್ರನಾಥ ಬಸದಿಯಿಂದ ರತ್ನಗಿರಿ ಬೆಟ್ಟದವರೆಗೆ ಆಗ್ರೋದಕ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಜೈನ ಮುನಿಗಳು ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv