ಮಾನವೀಯತೆ ಮೆರೆದ ಮಾಗಡಿ ಶಾಸಕ ಎ.ಮಂಜುನಾಥ್

ರಾಮನಗರ: ನಡು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಬಿದ್ದಿದ್ದ ಮಹಿಳೆಯರನ್ನು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಸೇರಿಸುವ ಮೂಲಕ ಮಾಗಡಿ ಶಾಸಕ ಮುಂಜುನಾಥ್ ಮಾನವೀಯತೆ ಮೆರೆದಿದ್ದಾರೆ. ಮಾಗಡಿ – ಹುಲಿಯೂರು ದುರ್ಗಾ ಮಾರ್ಗದ ನಡುವಿನ ಕೋಂಡಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿತ್ತು. ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಇಬ್ಬರು ಮಹಿಳೆಯರನ್ನು ಕಂಡು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಸಂತೈಸಿದರು. ನಂತರ ಇಬ್ಬರು ಗಾಯಾಳು ಮಹಿಳೆಯರನ್ನು ತಮ್ಮ ಕಾರಿನಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv