ಟಿಕ್​ಟಾಕ್ ಪ್ರಿಯರಿಗೆ ಸಿಹಿ ಸುದ್ದಿ, ಹೈಕೋರ್ಟ್​​ನಿಂದ ನಿಷೇಧ ತೆರವು

ಚೆನ್ನೈ: ಟಿಕ್​ಟಾಕ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತದಲ್ಲಿ ದಿನಬೆಳಗಾಗುವುದರೊಳಗೆ ಖ್ಯಾತಿ ಗಳಿಸಿದ ಚೀನಾದ ಟಿಕ್​ಟಾಕ್ ವಿಡಿಯೋ ಆ್ಯಪ್​​ಗೆ ನಿಷೇಧ ಇಲ್ಲ. ಈ ಸಂಬಂಧ ಮದ್ರಾಸ್​ ಹೈಕೋರ್ಟ್​ ಇಂದು ತೀರ್ಪು ನೀಡಿದ್ದು, ಟಿಕ್​ಟಾಕ್ ಆ್ಯಪ್ ಅನ್ನು ಡೌನ್​ಲೋಡ್​​ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅದರ ಮೇಲಿನ ನಿಷೇಧ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.
ದೇಶಾದ್ಯಂತ ಟಿಕ್​ಟಾಕ್ ಆ್ಯಪ್​​ ಬಳಕೆ ನಿಷೇಧಿಸಿ ಏಪ್ರಿಲ್​ 22ರಂದು ಸುಪ್ರೀಂಕೋರ್ಟ್​ ಮಧ್ಯಂತರ ಆದೇಶ ನೀಡಿತ್ತು. ಜೊತೆಗೆ ಟಿಕ್​ಟಾಕ್ ಆ್ಯಪ್ ನಿಷೇಧ ಸಂಬಂಧ ಮದ್ರಾಸ್​ ಹೈಕೋರ್ಟ್ ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ತಾನು ನಿಷೇಧವನ್ನ ತೆರವುಗೊಳಿಸುವುದಾಗಿ ಎಚ್ಚರಿಸಿತ್ತು.
ಆನ್​​ಲೈನ್​ ಸ್ಪೀಚ್​​ ಮತ್ತು ಸೋಷಿಯಲ್ ಮೀಡಿಯಾವನ್ನು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ 19 (1) (a) ವಿಧಿಯಡಿ​​ ಪರಿಗಣಿಸಲಾಗಿದೆ. ಹಾಗಾಗಿ ಅದನ್ನು ನಿಷೇಧಗೊಳಪಡಿಸಲು ಸಾಧ್ಯವಿಲ್ಲ ಎಂದು ಮದ್ರಾಸ್​ ಹೈಕೋರ್ಟ್​ನ ಮದುರೈ​ ನ್ಯಾಯಪೀಠಕ್ಕೆ ಮನದಟ್ಟುಪಡಿಸಲಾಗಿ, ನ್ಯಾಯಪೀಠವು ಟಿಕ್​ಟಾಕ್ ಆ್ಯಪ್ ಮೇಲಿನ ನಿಷೇಧವನ್ನು ವಾಪಸ್​ ಪಡೆಯಿತು.
ಏಪ್ರಿಲ್​ 18ರಂದು, ಮದ್ರಾಸ್​ ಹೈಕೋರ್ಟ್​ ತೀರ್ಪಿನಂತೆ, ಟಿಕ್​ಟಾಕ್ ಆ್ಯಪ್ ನಿಷೇಧದಿಂದ ಆ್ಯಪ್​ ಸ್ಟೋರ್​​ ಮತ್ತು ಪ್ಲೇ ಸ್ಟೋರ್​​ಗಳಲ್ಲಿ ಆ್ಯಪ್​ ಡೌನ್​​ಲೋಡ್​​ಗೆ ಕೇಂದ್ರ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿತ್ತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv