AIADMK ಬಂಡಾಯ ಶಾಸಕರ ಅನರ್ಹ ಕೇಸ್​: ಮದ್ರಾಸ್​​ ಹೈಕೋರ್ಟ್​ನಿಂದ ವಿಭಿನ್ನ ತೀರ್ಪು..!​

ಚೆನ್ನೈ: ತಮಿಳುನಾಡಿನ ಇ. ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ತಾತ್ಕಾಲಿಕವಾಗಿ ಬಿಗ್​​ ರಿಲೀಫ್ ಸಿಕ್ಕಿದೆ. ಅಣ್ಣಾಡಿಎಂಕೆಯ 18 ಶಾಸಕರು ಬಂಡಾಯವೆದ್ದ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​, ವಿಭಿನ್ನ ತೀರ್ಪನ್ನು ನೀಡಿದೆ. ಮದ್ರಾಸ್​ ಹೈಕೋರ್ಟ್​ನ ದ್ವಿಸದಸ್ಯ ಪೀಠದಿಂದ ಭಿನ್ನ ತೀರ್ಪು ಹೊರಬಿದ್ದಿದೆ. ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಆ ದ್ವಿಸದಸ್ಯ ಪೀಠವು ಅನರ್ಹತೆಯನ್ನು ಎತ್ತಿಹಿಡಿದಿದೆ. ಆದರೆ, ಅದೇ ನ್ಯಾಯಪೀಠದ ಮತ್ತೊಬ್ಬ ಜಸ್ಟೀಸ್​ ಸುಂದರ್​ ಅವರು ಅನರ್ಹತೆಯನ್ನು ಸರಿಯಲ್ಲ ಎಂದು ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮದ್ರಾಸ್​ ಹೈಕೋರ್ಟ್ ಸೂಚನೆ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv