‘ಸಭಾಧ್ಯಕ್ಷರೇ.. ಎಮೋಷನಲ್​ ಆ್ಯಕ್ಸಿಡೆಂಟಲ್​ ವಿಚಾರಗಳನ್ನ ಎತ್ತಬಾರದು’

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ರಿಲೀಸ್​ ಮಾಡಿರೋ ಆಡಿಯೋದ ಬಗ್ಗೆ ಚರ್ಚೆ ನಡೆಯುತ್ತಿದೆ. ಆಡಿಯೋದಲ್ಲಿ ಸ್ಪೀಕರ್​ ಹೆಸರು ಪ್ರಸ್ತಾಪ ಆಗಿರೋದಕ್ಕೆ ರಮೇಶ್​ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸಚಿವ ಕೃಷ್ಣಬೈರೇಗೌಡ ಅವರನ್ನ ಸಮಧಾನಪಡಿಸುವ ಪ್ರಯತ್ನ ಮಾಡಿದರು. ನಂತರ ವಿಪಕ್ಷದ ಪರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಮಾಧು ಸ್ವಾಮಿ ಮಧ್ಯಪ್ರವೇಶ ಮಾಡಿ, ನಾವು ನಿಮ್ಮ ಬಗ್ಗೆ ತುಂಬಾ ಗೌರವ, ಅಭಿಮಾನ ಇಟ್ಟುಕೊಂಡಿದ್ದೇವೆ. ಆ ಸ್ಥಾನಕ್ಕಾಗುವ ಅವಮಾನವನ್ನ ನಾವು ಸಹಿಸುವುದಿಲ್ಲ. ಸದನದ ಒಳಗಡೆ ಅದು ನಡೆದಿದ್ದರೆ ಅದರ ಬಗ್ಗೆ ಆ್ಯಕ್ಷನ್​ ತಗೆದುಕೊಳ್ಳೋಣ. ಆದ್ರೆ, ಅದು ಇಲ್ಲಿ ನಡೆದಿಲ್ಲ. ಇದನ್ನ ತಾವು ಇಷ್ಟೊಂದು ತೀಕ್ಷ್ಣವಾಗಿ ತೆಗೆದುಕೊಳ್ಳಬಾರದು. ಸದನದಲ್ಲಿ ನಡೆದಿದ್ದರೆ ಅದು ನಿಮ್ಮ ಹಕ್ಕು ಚ್ಯುತಿಯಾಗುತ್ತಿತ್ತು. ಆದ್ರೆ ಅದು ಹೊರಗೆ ನಡೆದಿರುವುದು ಎಂದರು. ನಿಮ್ಮ ಗೌರವಕ್ಕೆ ಧಕ್ಕೆ ಆಗಿರುವುದಕ್ಕೆ ನಾನು ವಿಷಾಧಿಸುತ್ತೇನೆ ಸಭಾಧ್ಯಕ್ಷರೆ. ಎಮೋಷನಲ್​ ಆ್ಯಕ್ಸಿಡೆಂಟಲ್​ ವಿಚಾರಗಳನ್ನ ಎತ್ತಬಾರದು. ಎಲ್ಲೋ ಏನೋ ನಡೆದ ಘಟನೆಗೆ ನೀವು ಇಷ್ಟೊಂದು ಪರಿಗಣಿಸುವ ಅವಶ್ಯಕತೆ ಇಲ್ಲ. ಇದನ್ನ ಇಲ್ಲಿಗೇ ಬಿಡಿ. ತನಿಖೆಗೆ ಆದೇಶಿಸಿ ಅಂತಾ ಹೇಳಿದರು.

ಆಗ ಸ್ಪೀಕರ್ ಮಾತನಾಡಿ, ಆಡಿಯೋದಲ್ಲಿ ಮಾತನಾಡಿರುವವರು ಸದನದಲ್ಲಿರುವವರರೇ ಆಗಿದ್ದಾರೆ. ಈ ಆರೋಪದ ಮುಖವನ್ನ ಹೊತ್ತು ನಾನು ಹೇಗೆ ಓಡಾಡಲಿ. ನನ್ನ ಪತ್ನಿ ಮಕ್ಕಳಿಗೆ ಹೇಗೆ ಮಖ ತೋರಿಸಲಿ. ನಮ್ಮ ಕುಟುಂಬಕ್ಕೆ ಹೇಗೆ ಮುಖ ತೋರಿಸಲಿ ಎಂದು ಮಾಧುಸ್ವಾಮಿ ಮಾತಿಗೆ ನಕಾರ ವ್ಯಕ್ತಪಡಿಸಿದ್ರು. ಎರಡು ದಿನ ಜೀವವನ್ನ ಅಂಗೈಯಲ್ಲಿಟ್ಟುಕೊಂಡು ಇವತ್ತಿಗಾಗಿ ಕಾದಿದ್ದೇನೆ. ಅಲ್ಲದೇ ಮಾಧ್ಯಮದವರು ಕೇಳಿದ್ರು, ಅದು ಯಡಿಯೂರಪ್ಪರ ಧ್ವನಿ ಎಂದು. ಅದಕ್ಕೆ ನಾನು ಹೇಳಿದೆ,  ಯಡಿಯೂರಪ್ಪ ನನಗೆ ಚಿರ ಪರಿಚಿತರು. ಇದು ಅವರ ಧ್ವನಿ ಅಲ್ಲ. ಅವರ ಧ್ವನಿಯನ್ನ ನಾನು ಕೇಳಿದ್ದೇನೆ. ನನಗೆ ಯಾರನ್ನೂ ನೋಯಿಸುವ ಇಷ್ಟವಿಲ್ಲ. ನಾನು ಈ ಸಮಾಜದಲ್ಲಿ ಬದುಕಬೇಕು ಎಂದರು.

ಈ ವೇಳೆ ಕೃಷ್ಣಬೈರೇಗೌಡ ಮಧ್ಯಪ್ರವೇಶ ಮಾಡಿ, ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಈ ಪ್ರಕರಣ ಇತ್ಯರ್ಥ ಆಗಬೇಕು. ಇಲ್ಲಿ ದಾರಿಯಲ್ಲಿ ಹೋಗುವ ಯಾವುದೋ ವ್ಯಕ್ತಿ ಆಡಿರುವ ಮಾತಾ? ಅಥವಾ ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಗಳು ಆಡಿರುವ ಮಾತಾ ಅನ್ನೋದರ ಬಗ್ಗೆ ಇತ್ಯರ್ಥ ಆಗಲಿ. ಇದು ನಿಮ್ಮ ವೈಯಕ್ತಿಕ ಅಲ್ಲ ಅಂತಾ ಹೇಳಿದರು.