ಹಕ್ಕು ಚಲಾಯಿಸಿದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ

ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ, ತಮ್ಮ ಹಕ್ಕನ್ನು ಚಲಾಯಿಸಿದರು. ಸೊರಬ ತಾಲೂಕಿನ ಕುಬಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 2ರಲ್ಲಿ ಮತ ಚಲಾಯಿಸಿದರು.

ಮತದಾನಕ್ಕೂ ಮುನ್ನಾ ಕುಬಟೂರಿನ ಬಂಗಾರ ನಿವಾಸದಲ್ಲಿ ತಂದೆ ಎಸ್.ಬಂಗಾರಪ್ಪ, ತಾಯಿ ಶಕುಂತಲಾ ಹಾಗೂ ಮನೆಯ ಹಿರಿಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಅದಾದ ನಂತರ ಮತಗಟ್ಟೆಗೆ ಹೋಗಿ ಮತದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ದೇಶದ ದಿಕ್ಕನ್ನು ಬದಲಾಯಿಸಲು ಬಿಜೆಪಿ ವಿರುದ್ಧ ಮತ ಹಾಕುವ ಭಾಗ್ಯ ಸಿಕ್ಕಿದೆ. ಇಡೀ ದೇಶವನ್ನು ಒಳ್ಳೆಯ ದಿಕ್ಕಿಗೆ ತೆಗೆದುಕೊಂಡು ಹೋಗುವ ಮನಸ್ಸನ್ನ ಮತದಾರ ಮಾಡಿದ್ದಾನೆ. ಸಮ್ಮಿಶ್ರ ಸರ್ಕಾರಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಐದು ವರ್ಷದವರೆಗೆ ಯಡಿಯೂರಪ್ಪಗೆ ಕೆಲಸ ಮಾಡೋಕೆ ಅವಕಾಶವೇ ಕೋಡಲ್ಲ. ಅಡ್ವಾಣಿಯನ್ನು ಮೂಲೆ ಗುಂಪು ಮಾಡಿದ ಹಾಗೇ ಯಡಿಯೂರಪ್ಪ ಇನ್ಮುಂದೆ ಮುಂದೆ ಕೆಲಸ ಮಾಡೋಕೆ ಅವಕಾಶ ಕೊಡಲ್ಲ. ಜನರಿಂದ ಆಯ್ಕೆಯಾದ ಸರ್ಕಾರವನ್ನ ಬೀಳಿಸೋ ದ್ರೋಹ, ಪಾಪವನ್ನ ಯಡಿಯೂರಪ್ಪ ಮಾಡಿಕೊಂಡು ಬರುತ್ತಿದ್ದಾರೆ. ಒಬ್ಬರೇ ಒಬ್ಬ ಕಾರ್ಯಕರ್ತರನ್ನೂ ಕೂಡ ಸ್ವಾರ್ಥಿ ಯಡಿಯೂರಪ್ಪ ಬೆಳೆಸಿಲ್ಲ. ಇದಕ್ಕೆಲ್ಲ ಈ ಬಾರಿಯ ಚುನಾವಣೆ ಅಂತ್ಯ ಹಾಡಲಿದೆ. ಸರ್ಕಾರಕ್ಕೆ ಏನೂ ಆಗಲ್ಲ ಎಂದರು.

 

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv