‘ಕೈ’ ಕೊಟ್ಟು ‘ಕಮಲ’ ಹಿಡಿಯಲಿದ್ದಾರೆ ಈ ಜಿ.ಪಂ ಅಧ್ಯಕ್ಷ..!

ಚಾಮರಾಜನಗರ: ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜಕೀಯ ಮುಖಂಡರ ಜಂಪಿಂಗ್‌ ಜಪಾಂಗ್‌ ಕೂಡ ಜೋರಾಗೆ ನಡೀತಿದೆ. ಟಿಕೆಟ್‌ ಆಕಾಂಕ್ಷಿಗಳ ಒಲವು ಬೇರೆಬೇರೆ ಪಕ್ಷಗಳತ್ತ ವಾಲುತ್ತಿದೆ. ಹೊಸ ಬೆಳವಣಿಗೆಯೊಂದರಲ್ಲಿ ಹೆಚ್‌.ಡಿ ಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರ ಇದೀಗ ಪಕ್ಷಕ್ಕೆ ‘ಕೈ’ ಕೊಟ್ಟಿದ್ದಾರೆ. ಇವತ್ತು ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಇದೇ ಸೋಮವಾರ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಎಂ.ರಾಮಚಂದ್ರ ನಡಿಗೆ ಬಿಜೆಪಿ ಕಡೆಗೆ..?
ಕಾಂಗ್ರೆಸ್​ನಿಂದ ಜಯಗಳಿಸಿದ್ದ ಎಂ.ರಾಮಚಂದ್ರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಈ ಭಾರಿ ವಿಧಾನಸಭಾ ಚುನಾವಣೆಗೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್​ನಿಂದ ಅನಿಲ್​ಗೆ ಟಿಕೆಟ್​ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಮಚಂದ್ರ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *