ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಳ್ಳಿ ನಾಣ್ಯದ ಆಮಿಷ..!

ಕಲಬುರ್ಗಿ: ರಾಜ್ಯ ವಿಧಾನ ಪರಿಷತ್​ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರತಾಪ್ ರೆಡ್ಡಿಗೆ ಮತ ಹಾಕುವಂತೆ ಬೆಳ್ಳಿ ನಾಣ್ಯ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಲಬುರ್ಗಿ ಜಿಲ್ಲೆಯ ವಾಡಿ ನಗರದ ಮತಗಟ್ಟೆ ಸಂಖ್ಯೆ 67ರ ಬಳಿ‌ ನಾಣ್ಯ ಹಂಚಿದ್ದರು. ಈ ವೇಳೆ ನಾಣ್ಯ ಹಂಚುತಿದ್ದ ಜೆಡಿಎಸ್ ಅಭ್ಯರ್ಥಿ ಪ್ರತಾಪ್​ ರೆಡ್ಡಿಯವರ, ಬೆಂಬಲಿಗನನ್ನು ‌ಬಿಜೆಪಿ ಕಾರ್ಯಕರ್ತರೇ ಹಿಡಿದು ಚುನಾವಣಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇನ್ನು ಆರೋಪಿ ಭಾಸ್ಕರ್​ ರೆಡ್ಡಿಯನ್ನು ಬಂಧಿಸಿದ ವಾಡಿ ಠಾಣೆಯ ಪೊಲೀಸರು ಆತನಿಂದ 48 ಬೆಳ್ಳಿ ನಾಣ್ಯಗಳು ಮತ್ತು ಜೆಡಿಎಸ್ ಅಭ್ಯರ್ಥಿ ಭಾವಚಿತ್ರ ಇರುವ ಕರಪತ್ರವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಭಾಸ್ಕರ್​ ರೆಡ್ಡಿ ನಾಣ್ಯ ಹಂಚುತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ತನ್ನ ಜೊತೆ ಬಳ್ಳಾರಿಯಿಂದ ಇನ್ನೂ 20 ಜನ ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv