ಮಕ್ಕಳ ಲಂಚ್​​ ಬಾಕ್ಸ್​​​ನಲ್ಲಿ ಏನೇನು ಇರಬೇಕು..?

ಕಳೆಯಿತು ಈ ಬೇಸಿಗೆ, ಹೊರಡೋಣ ಇನ್ನು ಸ್ಕೂಲಿಗೆ ಅಂತಾ ಮಕ್ಕಳು ಮತ್ತೆ ಶಾಲೆಯ ಮೆಟ್ಟಿಲನ್ನು ಹತ್ತಲು ಆರಂಭಿಸಿದ್ದಾರೆ. ಹೊಸದಾಗಿ ಶಾಲೆ ಆರಂಭವಾಗ್ತಿರೋದ್ರಿಂದ ಮಕ್ಕಳಿಗಂತೂ ಹೊಸದಾದ ಸ್ಕೂಲ್ ಬ್ಯಾಗ್, ಹೊಸ ಯೂನಿಫಾರ್ಮ್, ಹೊಸ ಶೂ ಮತ್ತೆ ಹೊಸ ಲಂಚ್​​ ಬಾಕ್ಸ್​ ಬೇಕೆ ಬೇಕು ಅಂತಾ ಹಟ ಹಿಡಿಯೋದು ಸಹಜ. ಅದ್ರಲ್ಲೂ, ಮಕ್ಕಳಿಗೆ ಲಂಚ್ ಬಾಕ್ಸ್ ಕಟ್ಟೋ ಕೆಲಸ ಇದೆಯಲ್ಲ ಅದೆಷ್ಟು ಕಷ್ಟ ಅಂತಾ ಅಮ್ಮಂದಿರಿಗೇ ಗೊತ್ತು. ವೆರೈಟಿ ತಿಂಡಿ ಮಾಡಿ ಲಂಚ್ ಬಾಕ್ಸ್​​ಗೆ ಕಟ್ಟಿದ್ರೂ, ಈ ಮಕ್ಕಳನ್ನ ಮಾತ್ರ ಒಪ್ಪಿಸೋಕಾಗಲ್ಲ ನೋಡಿ. ರುಚಿ ರುಚಿಯಾಗಿ, ಮಕ್ಕಳ ಬೇಕು ಬೇಡಗಳನ್ನ ಅರಿತು ಹೆಲ್ದಿ ಲಂಚ್ ಕಟ್ಟಬೇಕಲ್ಲ. ಆದ್ರೆ ಸಾಕಷ್ಟು ಅಮ್ಮಂದಿರು ಮಕ್ಕಳ ಹಟಕ್ಕಾಗಿ ಅವರು ಹೇಳಿದ್ದ ತಿಂಡಿಯನ್ನೇ ಬಾಕ್ಸ್‌ಗೆ ಹಾಕ್ತಾರೆ. ಹಾಗಿದ್ರೆ ಬೆಳೆಯೋ ಮಕ್ಕಳ ಲಂಚ್ ಬಾಕ್ಸ್‌ನಲ್ಲಿ ಯಾವ ಆಹಾರ ಪದಾರ್ಥ ಎಷ್ಟು ಪ್ರಮಾಣ ದಲ್ಲಿರಬೇಕು? ಪೌಷ್ಟಿಕಾಂಶ ಪ್ರಮಾಣ ಹೇಗಿರಬೇಕು ಅಂತಾ ಫಸ್ಟ್ ನ್ಯೂಸ್ ನೊಂದಿಗೆ ಮಾತನಾಡಿದ ಮಕ್ಕಳ ತಜ್ಞ ವೈದ್ಯರು ಈ ಲಂಚ್ ಬಾಕ್ಸ್ ಟಿಪ್ಸ್ ಕೊಟ್ಟಿದ್ದಾರೆ.

ಯಾವುದ್ಯಾವುದು ಎಷ್ಟೆಷ್ಟು ಪ್ರಮಾಣದಲ್ಲಿರಬೇಕು?!

1. ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿ ಸ್ಕಿಪ್ ಮಾಡೋಕೆ ಬಿಡಬೇಡಿ
2. ಲಂಚ್ ಬಾಕ್ಸ್‌ನಲ್ಲಿರೋ ಆಹಾರವನ್ನ 5 ಭಾಗ ಮಾಡಿದ್ರೆ ಈ ಕಾರ್ಬೋಹೈಡ್ರೇಟ್ಸ್ ಪ್ರೊಟೀನ್ಸ್ , ಮಿನರೆಲ್ಸ್, ಈ ಎಲ್ಲಾ ಪೌಷ್ಟಿಕಾಂಶಗಳು ಅದರಲ್ಲಿಬೇಕು.
3. ಮೊದಲ ಕಾಲು ಭಾಗ ಸೀಸನಲ್ ಫ್ರೂಟ್ಸ್, 2 ನೇ ಕಾಲು ಭಾಗ ಹಸಿತರಕಾರಿ, 3 ನೇ ಕಾಲು ಭಾಗ ಧಾನ್ಯಗಳಿಂದ ತಯಾರಿಸಿದ ತಿನಿಸು (ಉದಾ, ಚಪಾತಿ,ಅನ್ನ,ರಾಗಿ), 4 ನೇ ಕಾಲು ಭಾಗ ಡ್ರೈಫ್ರೂಟ್ಸ್, ಸೋಯಾ, ಬೇಳೆಕಾಳುಗಳು, 5 ನೇ ಕಾಲು ಭಾಗ ಹಾಲು, ಹಾಲಿನ ಉತ್ಪನ್ನಗಳು ಅಂದ್ರೆ ಹಾಲು, ಮೊಸರು, ಬೆಣ್ಣೆ, ತುಪ್ಪ
4. ಜಂಕ್ ಪದಾರ್ಥಗಳು ಅಂದ್ರೆ ಪಪ್ಸ್, ಬ್ರೆಡ್, ಚಿಪ್ಸ್, ಬರ್ಗರ್, ಪಿಜ್ಜಾ, ಲಂಚ್ ಬಾಕ್ಸ್​ಗೆ ಬೇಡವೇ ಬೇಡ
5. ವಾರದ 6 ದಿನ ಮೇಲಿನ 5 ರೀತಿಯ ಆಹಾರ ಪದಾರ್ಥಗಳು ಮಿಸ್ ಆಗದಂತೆ ವಿವಿಧ ಕಾಂಬಿನೇಷನ್ ಫುಡ್ ಚಾರ್ಟ್ ಹಾಕಿಕೊಳ್ಳಿ
6. ಉದಾಹರಣೆಗೆ ಸೋಮವಾರ ಚಪಾತಿ-ದಾಲ್, ಮಾವಿನಹಣ್ಣು, ಕ್ಯಾರೆಟ್-ಸೌತೆಕಾಯಿ, ಡ್ರೈಫ್ರೂಟ್ಸ್, ಮೊಸರು ಇದ್ರೆ.. ಮಂಗಳವಾರ ರೈಸ್ ಐಟಮ್, ಬೀಟ್ ರೂಟ್, ಬಾಳೆಹಣ್ಣು, ಮೊಳಕೆ ಕಾಳುಗಳು, ಪನ್ನೀರ್ ಡಿಶ್ ಹೀಗೆ ವಾರದ 6 ದಿನ ಮಿಕ್ಸ್ ಕಾಂಬಿನೇಷನ್ ಮಾಡ್ಕೋಬಹುದು.
7. ಲಂಚ್ ಬಾಕ್ಸ್ ನಲ್ಲಿ ಒಂದು ಸಣ್ಣ ವಾಟರ್ ಬಾಟಲ್, ನ್ಯಾಪ್ಕಿನ್ ಇದ್ರೆ ಒಳ್ಳೆದು
8. ಊಟ ಮಾಡುವಾಗ ಕೈ ತೊಳೆದೇ ಊಟ ಮಾಡೋದನ್ನ ಹೇಳಿ ಅಭ್ಯಾಸ ಮಾಡಿಸಿ
9. ಊಟದ ಬಾಕ್ಸ್​​ನಲ್ಲಿ ಉಳಿಸಿಕೊಂಡು ಬಂದ್ರೆ ಗದರದೆ ಮನವೊಲಿಸಿ

ಸ್ವಲ್ಪ ದಿನ ಈ ಟಿಪ್ಸ್‌ನ ಫಾಲೋ ಮಾಡಿದ್ರೆ ಮಕ್ಕಳು ನಂತ್ರ ಅವರಾಗೇ ಮಾತು ಕೇಳ್ತಾರೆ. ಅಮ್ಮಂದಿರಗೂ ನಿರಾಳ. ಏನಂತೀರಿ. ನಾಳೆ ಲಂಚ್ ಬಾಕ್ಸ್‌ಗೆ ಈಗಲೇ ಐಡಿಯಾ ಮಾಡಿಬಿಡಿ.

ವಿಶೇಷ ಬರಹ: ಐಶ್ವರ್ಯ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv