ಮಾಲೀಕನ ನೆನೆದು ಶವದ ಪಕ್ಕ ಮಲಗಿ ಗಂಟೆಗಟ್ಟೆಲೇ ರೋದಿಸಿದ ಶ್ವಾನ..!

ತಾವು ನಂಬಿದವ್ರ ಮೇಲೆ ನಾಯಿಗಳು ಇಡುವ ಪ್ರೀತಿಯೇ ಅಂತದ್ದು. ವಿಶ್ವಾಸ ಅಂದ್ರೆ ವಿಶ್ವಾಸ. ನಿಯತ್ತು ಅಂದ್ರೆ ನಿಯತ್ತು. ಅಂತೆಯೇ  ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಹೆಣವಾಗಿ ಬಿದ್ದಿರುವ ತನ್ನ ಮಾಲೀಕನಿಗಾಗಿ ರೋದಿಸುವ ವಿಡಿಯೋ ನೆಟ್ಟಿಗರ ಹಾರ್ಟ್​ಬ್ರೇಕ್ ಮಾಡಿದೆ.

ಅಂದ್ಹಾಗೆ ಈ ಘಟನೆ ಮ್ಯಾಕ್ಸಿಕೋದ ಮೊಂಟೆಮೊರೆಲೊಸ್​ನಲ್ಲಿ ನಡೆದಿದೆ. ವರದಿಗಳ ಪ್ರಕಾರ, 57 ವರ್ಷದ ವಿಕ್ಟರ್​ ರೆನ್ಯಾ, ಅನ್ನೋರು ವಿಪರೀತ ಮದ್ಯ ಸೇವನೆ ಮಾಡಿದ್ದರು. ಮದ್ಯ ಸೇವನೆ ಮಾಡಿ ಟ್ರ್ಯಾಕ್​ನಲ್ಲಿ ನಡೆದುಕೊಂಡು ಬರುತ್ತಿರುವಾಗ ಟ್ರೈನ್​​​​​ ಗುದ್ದಿಕೊಂಡು ಹೋಗಿದೆ. ಪರಿಣಾಮ ವಿಕ್ಟರ್ ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಅವರು ಸಾಕಿದ್ದ ನಾಯಿ ಸ್ಥಳಕ್ಕೆ ಬಂದಿದೆ. ಶವವಾಗಿ ಮಲಗಿದ್ದ ಮಾಲೀಕನನ್ನ ನೋಡಿ ಕಣ್ಣೀರಿಟ್ಟಿದೆ. ಅಲ್ಲದೇ ತನ್ನ ಮಾಲಿಕನನ್ನ ಮೇಲೆತ್ತಲು ಪ್ರಯತ್ನಿಸಿದೆ. ಕೊನೆಗೆ ಮಾಲೀಕನ ಜೊತೆ ತಾನೂ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿದೆ. ಆಗ ಪೊಲೀಸರು ಹಾಗೂ ಸ್ಥಳೀಯರು ಬಾಡಿಯನ್ನ ಟ್ರ್ಯಾಕ್​ನಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಕೋಪಿಸಿಕೊಂಡ ನಾಯಿ, ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದೆ. ಅಲ್ಲದೇ ಓರ್ವ ಪೊಲೀಸ್​ ಪೇದೆಗೆ ಕಚ್ಚಿ ಗಾಯ ಕೂಡ ಮಾಡಿದೆ ಎನ್ನಲಾಗಿದೆ.

ತನ್ನ ಮಾಲೀಕನಿಗಾಗಿ ನಾಯಿ ಹಳಿಯಲ್ಲಿ ಮಲಗಿ ಕಂಬನಿ ಮಿಡಿಯುತ್ತಿರುವ ದೃಶ್ಯವನ್ನ ಯಾರಿ ಟ್ರೆವೊನೊ ಅನ್ನೋರು ತಮ್ಮ ಟ್ವಿಟರ್​ನಲ್ಲಿ ಹಾಕಿಕೊಂಡಿದ್ದು, ಇದು ಸಖತ್ ವೈರಲ್ ಆಗಿದೆ.