ಪ್ರೇಮಿಗಳ ದಿನದಂದೇ ಪ್ರೇಮಿ ಕೊಲೆ

ದೊಡ್ಡಬಳ್ಳಾಪುರ: ವ್ಯಾಲೆಂಟೇನ್ಸ್ ಡೇ ಅನ್ನೋದು ಪ್ರೇಮಿಗಳ ಪಾಲಿಗೆ ಒಳ್ಳೇ ದಿನ. ಆದರೆ, ದೊಡ್ಡಬಳ್ಳಾಪುರದ ಯುವಕನೊಬ್ಬನ ಪಾಲಿಗೆ ಈ ದಿನ ಸಾವಿನ ದಿನವಾಗಿ ಪರಿಣಮಿಸಿದೆ.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೊಡ್ಡ ಬಳ್ಳಾಪುರ ತಾಲೂಕಿನ ಕಂಚಿಗನಹಾಳದ ಯುವಕ ಹರೀಶ್ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅದೇ ಯುವತಿಯನ್ನು ಸಂತೋಷ್ ಎಂಬವನೂ ಕೂಡ ಪ್ರೀತಿಸುತ್ತಿದ್ದ. ಈ ತ್ರಿಕೋನ ಪ್ರೇಮ ಕಥೆಯಲ್ಲಿ ಸಂತೋಷ್ ಹರೀಶ್​ ನನ್ನು ದ್ವೇಷಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಮೃತ ಹರೀಶ್ ತನ್ನ ಸ್ನೇಹಿತ ಅಂಬರೀಶ್ ಎಂಬುವವನ‌ ಜೊತೆ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಸಂತೋಷ್‌ ಚಾಕುವಿನಿಂದ ಕತ್ತು ಮತ್ತು ಹೊಟ್ಟೆಗೆ ಇರಿದು ಕೊಲೆಗೈದಿದ್ದಾನೆ. ಘಟನೆ ಕುರಿತು ದೊಡ್ಡ ಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆಮರೆಸಿಕೊಂಡಿರೋ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *