ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮಗೆ ರಕ್ಷಣೆ ಕೊಡಿ ..!

ಚಿತ್ರದುರ್ಗ: ಪ್ರೀತಿಸಿ ಮನೆಬಿಟ್ಟು ಹೋದ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡು, ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದಾರೆ. ಚಿತ್ರದುರ್ಗದ ಮಹ್ಮದ್​​ ಯಾಸೀನ್​​ ಹಾಗೂ ಯುವತಿ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಮನೆ ಕಡೆಯಿಂದ ಪ್ರೇಮ ವಿವಾಹಕ್ಕೆ ವಿರೋಧವಿತ್ತು. ಹೀಗಾಗಿ ಮನೆಬಿಟ್ಟು ಓಡಿಹೋಗಿ ಮಸೀದಿಯಲ್ಲಿ ಪ್ರೇಮಿಗಳು ಮದುವೆ ಆಗಿದ್ದಾರೆ ಎನ್ನಲಾಗಿದೆ.
ಇನ್ನು ಭದ್ರಾವತಿಯ ಸಂಬಂಧಿಕರ ಮನೆಯಿಂದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಚಿತ್ರದುರ್ಗ ಎಸ್​​ಪಿ ಕಚೇರಿಗೆ ಪ್ರೇಮಿಗಳು ತೆರಳಿದ್ದರು. ಪ್ರೇಮಿಗಳನ್ನು ಪೊಲೀಸರು ಜೀಪಿನಲ್ಲಿ ಭದ್ರಾವತಿ ಠಾಣೆಗೆ ಕರೆದೊಯ್ದಿದ್ದಾರೆ. ಭದ್ರಾವತಿ ಠಾಣೆ ಸಿಪಿಐ ಸಲೀಂ, ಕುಟುಂಬಸ್ಥರ ಜೊತೆಗೆ ಸೇರಿ ನನಗೆ ಅನ್ಯಾಯ ಮಾಡುತ್ತಾರೆ ಎಂದು ಯುವತಿ ಭಯಪಡುತ್ತಿದ್ದಾರೆ. ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ ನಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಅಂಗಲಾಚಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv