ಸಾಕ್ಷ್ಯ ಹೇಳಲು ಬಂದ ಪ್ರೇಯಸಿ, ಕೋರ್ಟ್​ ಆವರಣದಲ್ಲಿ ಹೈಡ್ರಾಮ..!

ಬಾಗಲಕೋಟೆ: ಪೋಕ್ಸೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಸಾಕ್ಷ್ಯ ಹೇಳಲು ಬಂದಿದ್ದ ಯುವತಿಗೆ ಮನೆಯವರೇ ಥಳಿಸಿರುವ ಘಟನೆ ಜಿಲ್ಲಾ ನ್ಯಾಯಾಲಯದ ಎದುರು ನಡೆದಿದೆ.
ಅತ್ಯಾಚಾರ ಪ್ರಕರಣದ ಆರೋಪಿ ಯಂಕಪ್ಪನ ಪರ ಸಾಕ್ಷ್ಯ ಹೇಳಲು ಬಂದಿದ್ದ ಯುವತಿಯ ಮೇಲೆ ಅವರ ಕುಟುಂಬಸ್ಥರೇ ಸಾಕ್ಷಿ ಹೇಳದಂತೆ ಹಲ್ಲೆ ಮಾಡಿದ್ದಾರೆ. ಯಂಕಪ್ಪ, ಆ ಯುವತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಆರೋಪಿ ಯಂಕಪ್ಪನ ವಿರುದ್ಧ ಬನಹಟ್ಟಿ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದರು. ಇನ್ನು ಕೇಸ್​ ಸಂಬಂಧ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿತ್ತು. ಕೇಸ್ ವಿಚಾರಣೆ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಮತ್ತು ಯುವತಿ ಇಬ್ಬರೂ ಆಗಮಿಸಿದ್ದರು. ಈ ವೇಳೆ ಯುವತಿ ಆರೋಪಿಯ ಪರ ಸಾಕ್ಷ್ಯ ಹೇಳದಂತೆ ಮನೆಯವರೇ ಹಲ್ಲೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv