ಪ್ರೀತಿಯ ನಾಟಕವಾಡಿ ₹1.75 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ್ನಾ ಭೂಪ..?

ಬೆಂಗಳೂರು: ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡ ಭೂಪನೊಬ್ಬ ಯುವತಿಯನ್ನ ಬೆದರಿಸಿ ಬರೋಬ್ಬರಿ 1 ಲಕ್ಷದ 75 ಸಾವಿರ ಮೌಲ್ಯದ ಚಿನ್ನಾಭರಣ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದ್ದು, ಮೋಸ ಹೋದ ಯುವತಿಯ ತಂದೆ ಪೋಲಿಸರಿಗೆ ದೂರು ನೀಡಿದ್ದಾರೆ‌.

ಕೃಷ್ಣ ಅಲಿಯಾಸ್ ಲೋಕೇಶ್ ಎಂಬಾತ ಅಮಾಯಕ ಯುವತಿಯನ್ನ ಪ್ರೀತಿಸುವ ನಾಟಕವಾಡಿದ್ದ. ಆಕೆಯ ಜೊತೆ ಫೋಟೋಗಳನ್ನ ತೆಗೆದುಕೊಂಡಿದ್ದನಂತೆ. ಬಳಿಕ ಅವುಗಳನ್ನ ತೋರಿಸಿ ಮನೆಯಲ್ಲಿರುವ ಚಿನ್ನಾಭರಣ ತಂದು ಕೊಡು ಇಲ್ಲದಿದ್ದರೆ, ಇದೇ ಫೋಟೋಗಳನ್ನಿಟ್ಟುಕೊಂಡು ನೀನು ತನ್ನನ್ನ ಪ್ರೀತಿಸುತ್ತಿರುವ ವಿಚಾರವನ್ನ ಪ್ರಚಾರ ಮಾಡುತ್ತೇನೆ ಎಂದು ಬೆದರಿಸಿದ್ದಾನೆ‌. ಆತನ ಮಾತಿಗೆ ಹೆದರಿದ ಆಕೆ ಮನೆಯಲ್ಲಿದ್ದ 75 ಗ್ರಾಂ ಚಿನ್ನದ ಒಡವೆಗಳನ್ನ ತಂದು ಆತನಿಗೆ ಒಪ್ಪಿಸಿದ್ದಾಳೆ ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ತಂದೆ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದು, ವಂಚಕನ ವಿರುದ್ಧ ದೂರು ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv