ಸೂರತ್​​​ನಲ್ಲಿ ತಯಾರಾದ 6,690 ವಜ್ರಗಳ ಉಂಗುರ ವಿಶ್ವ ದಾಖಲೆ: ಕಮಲದ ಡಿಸೈನ್​​ ಯಾಕೆ?

ಭಾರತದ ವಜ್ರ ರಾಜಧಾನಿ ಸೂರತ್​​ನಲ್ಲಿ ಇಬ್ಬರು ಆಭರಣಕಾರರು ವಿಶಿಷ್ಟ ವಜ್ರದ ಉಂಗುರವನ್ನ ತಯಾರಿಸಿದ್ದು, ಗಿನ್ನೀಸ್​ ವಿಶ್ವ ದಾಖಲೆಯ ಪುಟ ಸೇರಿದೆ. ಸೂರತ್​ ಮೂಲದ ವಿಶಾಲ್​ ಅಗರ್ವಾಲ್​​ ಹಾಗೂ ಖುಷ್ಬೂ ಅಗರ್ವಾಲ್​​​ 6,690 ವಜ್ರಗಳನ್ನು ಬಳಸಿ ಈ ಉಂಗುರ ತಯಾರಿಸಿದ್ದಾರೆ. 18 ಕ್ಯಾರೆಟ್​​ನ ರೋಸ್​​ಗೋಲ್ಡ್​​ ಉಂಗುರವನ್ನು ಕಮಲದ ಆಕೃತಿಯಲ್ಲಿ ತಯಾರಿಸಲಾಗಿದ್ದು, 36 ದಳಗಳಿವೆ. ಪ್ರತಿ ದಳದಲ್ಲಿ 48 ವಜ್ರಗಳನ್ನ ಅಳವಡಿಸಲಾಗಿದೆ. ಇದೀಗ ಈ ಉಂಗುರ ವಿಶ್ವ ದಾಖಲೆ ನಿರ್ಮಿಸಿದೆ. ಇನ್ನು ಇದರ ಬೆಲೆ ಕೇಳಿದ್ರೆ ಬೆರಗಾಗ್ತೀರಿ.

ಗಿನ್ನೀಸ್​ ವರ್ಲ್ಡ್​​​ ರೆಕಾರ್ಡ್ಸ್​​​ನ ಪ್ರಕಾರ, ಈ ಉಂಗುರದ ಬೆಲೆ ಬರೋಬ್ಬರಿ 28 ಕೋಟಿ ರೂಪಾಯಿ. ಕಮಲದ ಉಂಗುರ 58 ಗ್ರಾಂ ತೂಕವಿದ್ದು, ಇದನ್ನು ವಿನ್ಯಾಸಗೊಳಿಸಲು 6 ತಿಂಗಳು ಹಿಡಿದಿದೆ. ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ವಿಶಿಷ್ಟ ಉಂಗುರದ ಹಿಂದಿರುವ ಉದ್ದೇಶ ಎಂದು ಆಭರಣ ತಯಾರಕರು ಹೇಳಿದ್ದಾರೆ. ಹಾಗೇ ಕಮಲ ಭಾರತದ ರಾಷ್ಟ್ರಪುಷ್ಪವಾದ್ದರಿಂದ ಇದೇ ಹೂವನ್ನು ಆಯ್ಕೆ ಮಾಡಿಕೊಂಡೆವು. ಹಾಗೇ ಇದು ನೀರಿನಲ್ಲಿ ಬೆಳೆಯುವ ಸೌಂದರ್ಯವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಫಳಫಳ ಹೊಳೆಯುವ ಈ ಕಮಲದ ಉಂಗುರದ ವಿಡಿಯೋವನ್ನು ಗಿನ್ನೀಸ್​ ಬುಕ್​ ಆಫ್​​ ರೆಕಾರ್ಡ್ಸ್​​ನ ಫೇಸ್​​ಬುಕ್​ ಪೇಜ್​​​ನಲ್ಲಿ ಹಂಚಿಕೊಳ್ಳಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

Most Diamonds Set On One Ring

This sparkling ring features 6,690 cut diamonds set on 36 petals of a golden flower. Congratulations to India's Vishal Agarwal and Khushbu Agarwal, creators of The Lotus Ring 💠💍

Posted by Guinness World Records on Tuesday, June 12, 2018

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv