ಉಗ್ರರ ಮೇಲಿನ ದಾಳಿ ವಿಜಯೋತ್ಸವ, ಯುವಕನ ಮೇಲೆ ಟಿಪ್ಪರ್ ಹರಿದು ಸಾವು

ಧಾರವಾಡ: ಪಾಕಿಸ್ತಾನದಲ್ಲಿ ಭಾರತೀಯ ವಾಯುಪಡೆ ಉಗ್ರರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ವಿಜಯೋತ್ಸವ ಆಚರಿಸಲಾಗಿತ್ತು. ಈ ವೇಳೆ ಶಿವು ಮಾದರ ಎಂಬ ಯುವಕನ ಮೇಲೆ ಟಿಪ್ಪರ್​ ಹರಿದು ಸಾವನ್ನಪ್ಪಿದ್ದಾನೆ.

ತಾಲೂಕಿನ ಮನಗುಂಡಿ ಗ್ರಾಮದ ಶ್ರೀನಗರ ಸರ್ಕಲ್​​ನಲ್ಲಿ ವಿದ್ಯಾರ್ಥಿಗಳು ವಿಜಯೊತ್ಸವ ಆಚರಿಸುತ್ತಿದ್ದರು. ಈ ವೇಳೆ ಟ್ರಾಫಿಕ್​ ಜಾಮ್ ಉಂಟಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಆಕ್ರೋಶಗೊಂಡ ಗ್ರಾಮಸ್ಥರು ಟಿಪ್ಪರ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಧಾರವಾಡ ‌ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.