ಬೈಕ್​ ಗೆ ಟಿಪ್ಪರ್ ಡಿಕ್ಕಿ – ಪಿಯುಸಿ ವಿದ್ಯಾರ್ಥಿ ಸಾವು.!

ಆನೇಕಲ್: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಹೊರವಲಯದ ಗೊಟ್ಟಿಗೆರೆ ಬಳಿಯ ನೈಸ್ ಬ್ರಿಡ್ಜ್ ಮೇಲೆ ನಡೆದಿದೆ. ಮೃತಪಟ್ಟವನನ್ನು ಪಿಯುಸಿ ವಿದ್ಯಾರ್ಥಿ ರಘುನಾಥ್ ರೆಡ್ಡಿ (18) ಎಂದು ಗುರುತಿಸಿಲಾಗಿದೆ. ಇಂದು ಬೆಳಗ್ಗೆ 9 ಗಂಟೆಯ ವೇಳೆ ಅಪಘಾತ ಸಂಭವಿಸಿದೆ. ಕಾಲೇಜಿಗೆ ಹೊರಟಿದ್ದ ರಘುನಾಥ್ ರೆಡ್ಡಿ ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುತ್ತಿದ್ದ. ಈ ವೇಳೆ ಕನಕಪುರ ಕಡೆ ಹೋಗುತ್ತಿದ್ದ ಟಿಪ್ಪರಿ ಲಾರಿ ಏಕಾಏಕಿ ಗೊಟ್ಟಿಗೆರೆ ರಸ್ತೆ ಕಡೆ ಹೋಗಲು ತಿರುಗಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಆಯಾತಪ್ಪಿ ಕೆಳಗೆ ಬಿದ್ದ ರಘುನಾಥ್ ರೆಡ್ಡಿ ಮೇಲೆ ಲಾರಿ ಹರಿದಿದೆ. ತೀವ್ರ ರಕ್ತಸ್ರಾವದಿಂದ ರಘುನಾಥ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಘಟನೆ ಖಂಡಿಸಿ ಸ್ಥಳೀಯ ನಾಗರೀಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv