ಅಯ್ಯಯ್ಯೋ.. ಮನೆಯೊಳಗೆ ನುಗ್ಗೇ ಬಿಡ್ತು ಲಾರಿ..!

ಅಚ್ಚಲು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಯೊಂದರ ಗೋಡೆ ಒಡೆದುಕೊಂಡು ಒಳಗೆ ನುಗ್ಗಿರುವ ಘಟನೆ ತಾಲೂಕಿನ ಅಚ್ಚಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್​​​ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಗ್ರಾನೈಟ್​​ ಹೊತ್ತಿದ್ದ ಲಾರಿ ಕನಕಪುರದಿಂದ ರಾಮನಗರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿದೆ. ಬಳಿಕ ವಿದ್ಯುತ್​​​ ಕಂಬಕ್ಕೆ ಗುದ್ದಿದ ಪರಿಣಾಮ ಕಂಬ ಮುರಿದುಬಿದ್ದಿದೆ. ಅಲ್ಲಿಗೂ ನಿಲ್ಲದ ಲಾರಿ, ಗೌರಮ್ಮ ಎಂಬುವವರ ಮನೆಗೆ ನುಗ್ಗಿದೆ. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *