‘ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂರಿಗೂ ಪೂರ್ವಜ’

ಗುಜಾರಾತ್​: ರಾಮಮಂದಿರ ನಿರ್ಮಾಣ ಪರ ಯೋಗ ಗುರು ಬಾಬಾ ರಾಮ್​ದೇವ್​ ಬ್ಯಾಟ್​ ಬೀಸಿದ್ದಾರೆ. ರಾಮ ಕೇವಲ ಹಿಂದೂಗಳಿಗೆ ಮಾತ್ರ ಪೂರ್ವಜನಲ್ಲ, ಮುಸ್ಲಿಂರಿಗೂ ಪೂರ್ವಜ ಎಂದು ಹೇಳಿಕೆ ನೀಡಿದ್ದಾರೆ. ಗುಜರಾತಿನ ಖೇಡಾ ಜಿಲ್ಲೆಯ ನಡಿಯಾಡ್ ನಗರದಲ್ಲಿ ಮಾತನಾಡಿದ ರಾಮ್​ದೇವ್, ರಾಮ ಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿ ಅಯೋಧ್ಯೆ ಸೂಕ್ತವಾದ ಸ್ಥಳ. ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸದೇ, ಮೆಕ್ಕಾ, ಮದೀನ ಅಥವಾ ವ್ಯಾಟಿಕನ್​ ಸಿಟಿಯಲ್ಲಿ ನಿರ್ಮಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ದೇಶದ ಘನತೆಯ ಪ್ರಶ್ನೆಯಾಗಿದೆ. ಅದನ್ನು ವೋಟ್​ ಬ್ಯಾಂಕಿಗಾಗಿ ಉಪಯೋಗಿಸೋದು ಸರಿಯಲ್ಲ ಎಂದು ರಾಮ್​ದೇವ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.