ಅಪ್ಪನಾದ ಸಂಭ್ರಮದಲ್ಲಿದ್ದಾರೆ ನಟ ಲೂಸ್​​ ಮಾದ

ಲೂಸ್ ಮಾದ ಅಂತಲೇ ಖ್ಯಾತಿ ಗಳಿಸಿರುವ ಸ್ಯಾಂಡಲ್​ವುಡ್​​​ ನಟ ಯೋಗೀಶ್​ ಈಗ ಅಪ್ಪನಾದ ಸಂಭ್ರಮದಲ್ಲಿದ್ದಾರೆ. ಇಂದು ಸಂಜೆ ಯೋಗಿ -ಸಾಹಿತ್ಯ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರೋ ಮದರ್​ವುಡ್ ಆಸ್ಪತ್ರೆಯಲ್ಲಿ ಯೋಗಿ ಪತ್ನಿ ಸಾಹಿತ್ಯ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂಜೆ 4.55ಕ್ಕೆ ಸಾಹಿತ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಅಂತಾ ವೈದ್ಯರು ತಿಳಿಸಿದ್ದಾರೆ.