ಈ ಬೂತ್​​ನಲ್ಲಿ ಪ್ರತಿಸಾರಿ ಶೇ.100ರಷ್ಟು ಮತದಾನ, ಇದರ ರಹಸ್ಯವೇನು ಗೊತ್ತಾ?

ಜುನಾಗಢ್​​ (ಗುಜರಾತ್​):  ಇಲ್ಲಿನ ಮತಗಟ್ಟೆಯೊಂದರಲ್ಲಿ ಪ್ರತಿ ಸಾರಿ ಶೇ. 100ರಷ್ಟು ಮತದಾನವಾಗುತ್ತೆ. ದೇಶದಲ್ಲಿ ಯಾರದ್ದೇ ಅಲೆ ಇರಲಿ ಅಥವಾ ಇರದಿರಲಿ. ಯಾರಾದ್ರೂ ಮತ ಹಾಕಲಿ, ಬಿಡಲಿ. ಈ ಬೂತ್​​ನಲ್ಲಿ ಮಾತ್ರ ನೂರಕ್ಕೆ ನೂರು ಪ್ರತಿಶತದಷ್ಟು ಮತದಾನವಾಗುತ್ತೆ. ಅರೆ ಇದೇನಪ್ಪ, ಇಷ್ಟು ಕರಾರುವಕ್ಕಾಗಿ ಇಲ್ಲಿ ಶೇ. 100ರಷ್ಟು ಮತದಾನವಾಗುತ್ತೆ ಅಂದ್ರಾ? Yesssss ರಹಸ್ಯವಿರೋದೆ ಅಲ್ಲಿ. ಅಷ್ಟಕ್ಕೂ ಆ ರಹಸ್ಯ ಏನು ಗೊತ್ತಾ? ಈ ಬೂತ್​ನ ರಹಸ್ಯವೇ ಭರತದಾಸ್ ಬಾಪು..!

ಅಷ್ಟಕ್ಕೂ ನಿಜ ಏನೆಂದ್ರೆ ಈ ಮತಗಟ್ಟೆಯಲ್ಲಿ ಇರೋದೇ ಏಕೈಕ ಮತದಾರ ಭರತದಾಸ್​​ ಬಾಪು. ಈ ಏಕೈಕ ಮತದಾರನಿಗಾಗಿ ವಿಶ್ವ ಪ್ರಸಿದ್ಧ ಗಿರ್ ಅರಣ್ಯ ಪ್ರದೇಶದೊಳಗಿನ ದುರ್ಗಮ ಸ್ಥಳವೊಂದರಲ್ಲಿ ಪ್ರತಿ ಚುನಾವಣೆ ವೇಳೆ ಒಂದು ಮತಗಟ್ಟೆ ಸ್ಥಾಪಿಸಲಾಗುತ್ತೆ. ಈ ಮತಗಟ್ಟೆಯಲ್ಲಿ ಭರತದಾಸ್ ಬಾಬು ವೋಟ್​ ಹಾಕೋದನ್ನು ಒಂದು ಬಾರಿಯೂ ತಪ್ಪಿಸಲ್ಲ. ಹೀಗಾಗಿ, ಅವರೊಬ್ಬರೇ ಮತದಾರರಾಗಿರೋದ್ರಿಂದ ಅವರು ವೋಟ್ ಹಾಕಿದ್ರೆ ಈ ಮತಗಟ್ಟೆಯಲ್ಲಿ ಶೇ. 100ರಷ್ಟು ಮತ ಆದಂತೆ ಇರುತ್ತೆ. ಅದೇ ರೀತಿ ಈ ಬಾರಿಯೂ ಆಗಿದೆ.

ದೇಶದಲ್ಲೆಡೆ ಶೇ. 100ರಷ್ಟು ಮತದಾನವಾಗಲಿ ಅನ್ನೋ ಆಶಯ..!
ನಾನು ಪ್ರಾಂಪ್ಟ್​​ ಆಗಿ ಮತ ಚಲಾಯಿಸಿದ್ದೇನೆ. ಇದರಿಂದ ಇಲ್ಲಿ ಶೇ. ನೂರರಷ್ಟು ಮತದಾನ ದಾಖಲಾಗಿದೆ. ಇಡೀ ದೇಶದಲ್ಲಿ ಹೀಗೆಯೇ 100 % ಮತದಾನ ಆಗಬೇಕು ಎಂಬುದೇ ನನ್ನ ಆಶಯ. ಅದರಂತೆ ನೀವೆಲ್ಲ ತಪ್ಪದೇ ಮತದಾನ ಮಾಡಿ ಅಂತಾ ಭರತ್​ದಾಸ್ ಬಾಪು ದೇಶದ ಮತದಾರರನ್ನು ಕೋರಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv