ವಿಶ್ವದಲ್ಲೇ 2ನೇ ಬಾರಿ, HIVಯಿಂದ ಗುಣಮುಖರಾದ ಲಂಡನ್​​ ವ್ಯಕ್ತಿ..!

ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಮಿರಾಕಲ್ಸ್​ ಆಗ್ತಾನೇ ಇರುತ್ತೆ. ಕೆಲವೊಂದಿಷ್ಟು ರೋಗಗಳಿಗೆ ಮಿಡಿಕೇಷನ್ಸ್​ಗಳೇ ಇರೋದಿಲ್ಲ. ಅಂತದ್ದೊಂದು ರೋಗ ಅಂದ್ರೆ ಅದು ಹೆಚ್​ಐವಿ ಸೋಂಕು​. ಆದ್ರೆ ಇದೀಗ ಹೆಚ್​ಐವಿ ಸೋಂಕಿನಿಂದ ರೋಗಿಯನ್ನು ಗುಣಪಡಿಸಬಹುದು ಅನ್ನೋ ಭರವಸೆ ಸಿಕ್ಕಿದೆ ಅಂತ ತಜ್ಞರು ಹೇಳ್ತಿದ್ದಾರೆ. ಹೌದು, ಬೋನ್ ಮ್ಯಾರೋ ಕಸಿ ಚಿಕಿತ್ಸೆ ಮೂಲಕ ಹೆಚ್​ಐವಿ ಸೋಂಕು ಹೊಂದಿದ್ದ ಲಂಡನ್​​ ಮೂಲದ ವ್ಯಕ್ತಿಯನ್ನ ಗುಣಪಡಿಸಲಾಗಿದೆ.

ಕಳೆದ 10 ವರ್ಷದ ಹಿಂದೆ ಇದೇ ಚಿಕಿತ್ಸೆ ಮೂಲಕ ಹೆಚ್​ಐವಿ ಪೀಡಿತರೊಬ್ಬರಿಗೆ ಸೋಂಕು ಕ್ಯೂರ್​ ಆಗಿತ್ತಂತೆ. ಇದೀಗ ಲಂಡನ್​ ಮೂಲದ ವ್ಯಕ್ತಿಗೆ ಹೆಚ್​ಐವಿ ಸೋಕು ಕ್ಯೂರ್​ ಆಗಿದೆ ಅಂತ London’s Division of Infection and Immunity ಯ ಪ್ರೊಫೆಸರ್​ ಡಾ.ರವೀಂದ್ರ ಗುಪ್ತ ಹೇಳಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ವ್ಯಕ್ತಿಯನ್ನ ಬೋನ್​ ಮ್ಯಾರೋ ಕಸಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತಂತೆ. ಈ ಪ್ರಯೋಗವೆಲ್ಲಾ ಮುಗಿದ ನಂತರ ಕಂಡು ಬಂದ ರಿಸಲ್ಟೇ ಹೆಚ್​ಐವಿ ಕ್ಯೂರ್​ ಆಗಿರೋದು. ಈ ಮೂಲಕ ಜಗತ್ತಲ್ಲೇ ಹೆಚ್​ಐವಿ ಸೋಂಕಿನಿಂದ ಗುಣಮುಖರಾದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.

CCR5 ಜೀನ್​​​ನ ಅಪರೂಪದ ಜೆನೆಟಿಕ್​​ ಮ್ಯುಟೇಷನ್​​​ವುಳ್ಳ ಡೋನರ್​​​ನಿಂದ ಲಂಡನ್​​ ವ್ಯಕ್ತಿಗೆ ಬೋನ್​​ ಮ್ಯಾರೋ ಕಸಿ ಮಾಡಲಾಗಿತ್ತು. ಇದರಿಂದ ಅವರು ಹೆಚ್​​ಐವಿ ನಿರೋಧಕರಾಗಿದ್ರು. ನಂತರ   ಅವರಿಗೆ ನೀಡಲಾಗ್ತಿದ್ದ ಆ್ಯಂಟಿರೆಟ್ರೋವೈರಲ್​ ಚಿಕಿತ್ಸೆ ಕೂಡ ನಿಲ್ಲಿಸಲಾಗಿತ್ತು. ಅಂದಿನಿಂದ ಅವರು ಸೋಂಕಿನಿಂದ ಮುಕ್ತರಾಗಿದ್ದಾರೆ. ಅವರು ಹೆಚ್​ಐವಿಯಿಂದ ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 18 ತಿಂಗಳಿನಿಂದ ಅವರು ಮೆಡಿಕೇಷನ್​ ತೆಗೆದುಕೊಳ್ಳದಿದ್ದರೂ ಹೆಚ್​ಐವಿ ಸೋಂಕು ಹಿಂದಿರುಗಿ ಬಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬೋನ್​​ ಮ್ಯಾರೋ ಅಂದ್ರೆ ಏನು..?
ನಮ್ಮ ದೇಹದ ಮೂಳೆಯೊಳಗಿನ ಮಧ್ಯಭಾಗದ ಮೃದುವಾದ ಅಂಗಾಂಶದ ಪದರವನ್ನು Bone Marrow ಎಂದು ಕರೆಯಲಾಗುತ್ತದೆ. ಬೋನ್​​ ಮ್ಯಾರೋ ಕಸಿಯನ್ನು ಹಲವು ರೀತಿಯ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv