ಕೇರಳದ ಮನೆ-ಮನಗಳಿಗೆ ಪ್ರಿಯಾಂಕಾ ಗಾಳ

ವೈನಾಡು: ನಿನ್ನೆಯಷ್ಟೆ ಕೇರಳದ ವೈನಾಡಿನಲ್ಲಿ ಅಣ್ಣ ಪರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಬಹಿರಂಗ ಪ್ರಚಾರ ನಡೆಸಿದ್ರು. ಈ ವೇಳೆ ಅವರು ಕೇರಳದ ಮತದಾರರ ಮನಮನಗಳಿಗೆ ಗಾಳ ಹಾಕುವ ನಿಟ್ಟಿನಲ್ಲಿ ಅವರ ಮನೆಗಳಿಗೆ ಭೇಟಿ ನೀಡಿದ್ದಾರೆ. ಅದರಲ್ಲೂ ಸಿವಿಲ್ ಸರ್ವಿಸ್​ ಎಕ್ಸಾಂನಲ್ಲಿ ಪಾಸಾದ ಕೇರಳದ ಮೊದಲ ಆದಿವಾಸಿ ಮಹಿಳೆ ಎನಿಸಿರುವ ಶ್ರೀಧನ್ಯಾ ಸುರೇಶ್​ರ ನಿವಾಸಕ್ಕೆ ತೆರಳಿದ ಪ್ರಿಯಾಂಕಾ ಗಾಂಧಿ, ನೇರವಾಗಿ ಅಡುಗೆ ಮನೆಗೆ ಹೋಗಿದ್ದಾರೆ. ಅಲ್ಲಿ ತಿನ್ನೋಕೆ ಏನಿದೆ ಅಂತಾ ಸಲುಗೆಯಿಂದಲೇ ಮನೆಯ ಮಹಿಳೆಯರನ್ನ ಮಾತನಾಡಿಸಿದ ಅವರು ಅಲ್ಲಿ ತಯಾರು ಮಾಡಿಟ್ಟಿದ್ದ ತಿನಿಸು ಇದ್ದ ಪಾತ್ರೆಯನ್ನೇ ಹೊರಗಡೆ ಕೊಂಡೊಯ್ದು ಎಲ್ಲರಿಗೂ ಹಂಚಿ ತಿಂದಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಖತ್​ ವೈರಲ್ ಆಗ್ತಿದೆ.

ಇತ್ತಿಚೆಗೆ ತಮ್ಮ ಱಲಿಯ ವೇಳೆ ಅಸ್ವಸ್ಥಗೊಂಡಿದ್ದ ಪತ್ರಕರ್ತರೊಬ್ಬರನ್ನು ಌಂಬುಲೆನ್ಸ್​ಗೆ ಸಾಗಿಸಲು, ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ನೆರವಾಗಿದ್ರು. ಈ ಘಟನೆಯನ್ನು ಮರೆಯದ ಪ್ರಿಯಾಂಕಾ ಅಸ್ವಸ್ಥಗೊಂಡಿದ್ದ ಪತ್ರಕರ್ತನನ್ನು ಮಾತನಾಡಿಸಿ ಕುಶಲೋಪಚರಿ ವಿಚಾರಿಸಿದ್ದಾರೆ. ತಮಗೆ ಥ್ಯಾಂಕ್ಸ್​ ಹೇಳಲು ಬಂದಿದ್ದ ಪತ್ರಕರ್ತನನ್ನು ಮಾತನಾಡಿಸಿದ ಪ್ರಿಯಾಂಕಾ ಕೆಲಕಾಲ ಅವರೊಂದಿಗೆ ಸಮಾಲೋಚನೆ ನಡೆಸಿದ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv