ಹಿಂಸಾಚಾರ; ಪ. ಬಂ ಬಹಿರಂಗ ಪ್ರಚಾರಕ್ಕೆ ಅವಧಿಗೂ ಮೊದಲೇ ಕೊನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಹಿಂಸಾಚಾರಗಳು ನಡೆದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಬಹಿರಂಗ ಪ್ರಚಾರಕ್ಕೆ ನಾಳೆಯೇ ಕೊನೆ ಎಂದು ಆದೇಶ ಹೊರಡಿಸಿದೆ.

ಲೋಕಸಭೆಯ ಕೊನೆಯ ಹಂತದ ಚುನಾವಣೆ ಮೇ 19 ರಂದು ನಡೆಯಲಿದೆ. ಅದ್ರಂತೆ ಪಶ್ಚಿಮ ಬಂಗಾಳದಲ್ಲಿ 9 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಗದಿಯಂತೆ ಮೇ 17 ರ ರಾತ್ರಿ 10 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯಾಗಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ರಾಜಕೀಯ ನಾಯಕರ ಕಚ್ಚಾಟ ಹೆಚ್ಚಾಗುತ್ತಿದೆ. ಅದ್ರಲ್ಲೂ ನಿನ್ನೆಯಿಂದ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಱಲಿ ವೇಳೆ ಭಾರೀ ಹಿಂಸಾಚಾರ ನಡೆದಿತ್ತು. ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ವಾಕ್ಸಮರಕ್ಕೂ ಕಾರಣವಾಗಿತ್ತು. ಹಿಂಸಾಚಾರ ಪ್ರಕರಣ ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಈ ಎಲ್ಲಾ ಕಾರಣಗಳಿಂದಾಗಿ ನಾಳೆಯೇ ಬಹಿರಂಗ ಪ್ರಚಾರವನ್ನ ಅಂತ್ಯಗೊಳಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಹಾಗೇ ಚುನಾವಣಾ ಆಯೋಗ ಇಬ್ಬರು ಪ್ರಮುಖ ಅಧಿಕಾರಿಗಳನ್ನ ರಿಮೂವ್ ಮಾಡಿದೆ ಎಂದು ವರದಿಯಾಗಿದೆ. ಮೇ 19 ರಂದು ದುಮ್ ದುಮ್, ಬರಸಾತ್, ಬಸಿರ್ಹಾತ್, ಜಯನಗರ, ಮಥುರಾಪುರ, ಡೀಯಾಮೊಂಡ್​ ಹರ್​ಬೊವುರ್, ಸೌಥ್ ಆ್ಯಂಡ್​ ಕೋಲ್ಕತಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆ ಆಯೋಗ ಬಹಿರಂಗ ಪ್ರಾಚರಕ್ಕೆ ಇಂದೆ ಕೊನೆ ಎನ್ನುತ್ತಿದ್ದಂತೆ ಮತ್ತೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ರು. ನಿನ್ನೆ ನಡೆದ ಗಲಾಟೆಗೆ ಅಮಿತ್​​ ಶಾ ಅವ್ರೇ ಕಾರಣ. ಅದಕ್ಕೆ ಸಾಕ್ಷಿ ಅಂದ್ರೆ ಹಿಂಸಾಚಾರದಲ್ಲಿ ಸಿಕ್ಕಿರುವ ವಿಡಿಯೋಗಳು. ಹೀಗಿದ್ದೂ ಯಾಕೆ ಮೋದಿ ರಾಜ್ಯದ ಜನರ ಬಳಿ ಕ್ಷಮೆ ಕೇಳಲ್ಲ ಎಂದು ಪ್ರಶ್ನೆ ಮಾಡಿದರು. ಜೊತೆಗೆ ಹಿಂಸಾಚಾರ ಮಾಡಿದ್ದೂ ಅಲ್ಲದೇ ಅಮಿತ್ ಶಾ ಇಂದು ಸುದ್ದಿಗೋಷ್ಠಿ ನಡೆಸಿ ಚುನಾವಣಾ ಆಯೋಗಕ್ಕೆ ಮತ್ತು ನಮ್ಮ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv