ಫಿಫಾ ಅತಿಥಿಗಳೊಂದಿಗೆ ಮಲಗದಿರಿ, ಮಲಗಿ ಪ್ರೆಗ್ನೆಂಟ್​ ಆಗದಿರಿ..!

ಫಿಫಾ ಆತಿಥ್ಯ ವಹಿಸಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರವಾಗಿರುವ ರಷ್ಯಾದಲ್ಲಿ ಯುವತಿಯರಿಗೆ ವಿಶೇಷ ಸೂಚನೆಯೊಂದನ್ನ ನೀಡಲಾಗಿದೆ. ಫುಟ್ಬಾಲ್​ ನೋಡಲು ಆಗಮಿಸುವ ಹೊರರಾಷ್ಟ್ರಗಳ ಅತಿಥಿಗಳೊಡನೆ ಮಲಗದಂತೆ ಹಾಗೂ ಗರ್ಭಿಣಿ ಆಗದಂತೆ ಎಚ್ಚರವಹಿಸಲು ತಾಕೀತು ಮಾಡಲಾಗಿದೆ.

ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವ ತಮರ ಪ್ಲೆಟ್ನೆವಾ ಅವರು ಈ ಕುರಿತು ಅಲ್ಲಿನ ಸಂಸತ್​ನಲ್ಲಿ ಮಾತನಾಡಿದ್ದು, ಫುಟ್ಬಾಲ್​ ಅಭಿಮಾನಿಗಳೊಂದಿಗೆ ಡೇಟಿಂಗ್​ ನಡೆಸುವುದು ಹಾಗೂ ಪ್ರೆಗ್ನೆಂಟ್​ ಆಗುವುದನ್ನ ತಡೆಯಿರಿ ಅಂತ ಹೇಳಿದ್ದಾರೆ.

ಈ ಸೂಚನೆ ಹಿಂದಿನ ಕಾರಣ ಸ್ಪಷ್ಟವಾಗಿದೆ. ರಷ್ಯಾದಲ್ಲಿ ಮಗು ಹೆರುವುದಕ್ಕೇನೋ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಆದರೆ, ಹೊರರಾಷ್ಟ್ರದ ಫುಟ್ಬಾಲ್​ ಅಭಿಮಾನಿಗಳು ಹೀಗೆ ಗರ್ಭಿಣಿಯಾಗಿಸಿ ಕೈಕೊಟ್ಟು ಹೋದರೆ, ಮಗು ತಂದೆ ಇಲ್ಲದೇ ಅನಾಥವಾಗುವ ಭೀತಿಯನ್ನು ಅಲ್ಲಿನ ಸಂಸತ್​ ವ್ಯಕ್ತಪಡಿಸಿದೆ. ಅಲ್ಲದೇ, ಮಗುವಿನ ಪಾಲನೆಯ ಕಷ್ಟವನ್ನ ಕೇವಲ ರಷಿಯನ್​ ಮಹಿಳೆಯಷ್ಟೇ ಹೊರಬೇಕಾಗುತ್ತದೆ ಅಂತ ಅದು ಆತಂಕ ವ್ಯಕ್ತಪಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv