ಯಲಹಂಕ ಬಳಿ ಎರಡು ಲಘು ವಿಮಾನಗಳ ಡಿಕ್ಕಿ

ಬೆಂಗಳೂರು: ಯಲಹಂಕ ಬಳಿ ಸೂರ್ಯಕಿರಣ್ ಹೆಸರಿನ ಎರಡು ಲಘು ವಿಮಾನಗಳು ಡಿಕ್ಕಿ ಹೊಡೆದ ಘಟನೆ ನಡೆದಿದೆ. ನಾಳೆ ಆರಂಭವಾಗಲಿರುವ ಏರೋ ಶೋ ತಾಲೀಮಿನ ವೇಳೆ ಈ ಘಟನೆ ನಡೆದಿದ್ದು, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನು ಎರಡೂ ವಿಮಾನಗಳ ಪೈಲ್​ಟಗಳು ಅಪಘಾತಕ್ಕೂ ಮುನ್ನ ಇಜೆಕ್ಟ್ ಆದ ಹಿನ್ನೆಲೆಯಲ್ಲಿ ಅವರ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.