‘ರಾಹುಲ್ ತಲೆಗೆ ಗುರಿಯಿಟ್ಟಿದ್ದು ಗನ್​​ ಅಲ್ಲಾರಿ, ಕಾಂಗ್ರೆಸ್ ಫೋಟೋಗ್ರಾಫರ್ ಮೊಬೈಲ್ ಲೈಟ್..!’

ದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಜೀವಕ್ಕೆ ಅಪಾಯ ಇದೆ. ಅಮೇಥಿಯಲ್ಲಿ ಅವರು ನಾಮಿನೇಷನ್​ ಮಾಡುವ ವೇಳೆ ಯಾರೋ ಗ್ರೀನ್​ ಲೇಸರ್ ಗನ್​ ಪಾಯಿಂಟ್​ನಿಂದ ಅವ​​ರ ತಲೆಗೆ ಗುರಿಯಿಟ್ಟಿದ್ದರು ಎಂಬ ಕಾಂಗ್ರೆಸ್ ಆಪಾದನೆಗೆ​ ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿದೆ. ಕಾಂಗ್ರೆಸ್​​ ಪಕ್ಷದ ಫೋಟೋಗ್ರಾಫರ್​​​ ಬಳಸುತ್ತಿದ್ದ ಮೊಬೈಲ್​​ ಫೋನ್​​ನಿಂದ ಹಸಿರು ಲೇಸರ್ ಗನ್ ಲೈಟ್​​ ಬಂದಿದ್ದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ, ಪಕ್ಷದ ಅಧ್ಯಕ್ಷ ರಾಹುಲ್​​ ಭದ್ರತೆಯಲ್ಲಿ ಲೋಪವಾಗಿದೆ ಎಂದು ಕಾಂಗ್ರೆಸ್​​ನಿಂದ ಸಚಿವಾಲಯ ದೂರೇನು ಬಂದಿಲ್ಲ ಎಂದು ತಿಳಿಸಿದೆ. ರಾಹುಲ್​ಗೆ ಭದ್ರತೆ ನೀಡುವ SPG ನಿರ್ದೇಶನಾಲಯದ ಪ್ರಕಾರ ಘಟನೆ ನಡೆದ ಸಂದರ್ಭದ ವೀಡೀಯೊ ಪರಿಶೀಲಿಸಲಾಗಿದ್ದು, ಎಐಸಿಸಿ ಫೋಟೋಗ್ರಾಫರ್ ಚಿತ್ರೀಕರಣಕ್ಕಾಗಿ ಬಳಸುತ್ತಿದ್ದ ಮೊಬೈಲ್​​ ಫೋನ್​​ನಿಂದ ಹೊರಬಂದ ಲೈಟ್ ಅದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಹತ್ಯೆಗೆ ಯತ್ನ? ಲೇಸರ್​ ಗನ್ ಪಾಯಿಂಟ್ ಮಾಡಿದ್ದಾಗಿ ಕಾಂಗ್ರೆಸ್ ಆರೋಪ..!


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv