ಜೀವ ಬೆದರಿಕೆ: ಪತ್ನಿಯ ವಿರುದ್ಧವೇ ವೈದ್ಯ ಕಂ ರಾಜಕಾರಣಿಯಿಂದ ದೂರು

ಹುಬ್ಬಳ್ಳಿ: ಪ್ರಾಣಭಯದಿಂದ‌ ಪತ್ನಿ ವಿರುದ್ಧವೇ ವೈದ್ಯ ಕಂ ರಾಜಕಾರಣಿಯೊಬ್ಬರು ಪ್ರಕರಣ ದಾಖಲಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಖ್ಯಾತ ನ್ಯೂರೋಲಜಿಸ್ಟ್ ಡಾ. ಕ್ರಾಂತಿಕಿರಣ್ ಅವರು ಪತ್ನಿ ಶೋಭಾ ಅವರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.

ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಡಾ. ಕ್ರಾಂತಿಕಿರಣ್ ತಮ್ಮ ಪತ್ನಿ ಶೋಭಾ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 506, 504, 323 ಅಡಿ ಪ್ರಕರಣ ದಾಖಲಾಗಿದೆ.

ಡಾ. ಕ್ರಾಂತಿಕಿರಣ್ ದೂರಿನಲ್ಲಿ ನನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವ ಬೆದರಿಕೆ ಇದೆ. ಪತ್ನಿ ಶೋಭಾ ಅನೈತಿಕ ಸಂಬಂಧ ಹೊಂದಿದ್ದಾಳೆ. ಅದನ್ನ ಕೇಳಲು ಹೋದರೆ ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಡಾ. ಕ್ರಾಂತಿಕಿರಣ್ ಮತ್ತು ಶೋಭಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಕೂಡಾ ನಗರದಲ್ಲಿ ಖ್ಯಾತ ವೈದ್ಯರಾಗಿದ್ದಾರೆ. ಇಬ್ಬರೂ ಸೇರಿ ನಗರದಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಯನ್ನು ನಿರ್ಮಿಸಿ, ನಡೆಸುತ್ತಿದ್ದಾರೆ.

ಅಲ್ಲದೆ ಡಾ.ಕ್ರಾಂತಿಕಿರಣ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.ಆದರೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv