ಚೆನ್ನೈನಲ್ಲಿ ತಲೆ ಎತ್ತಿ ನಿಂತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭವ್ಯ ಕಂಚಿನ ಪ್ರತಿಮೆ..

ಚೆನ್ನೈ: ದೇಶ ಕಂಡ ಅಪ್ರತಿಮ ವೀರ, ಕನ್ನಡನಾಡಿನ ಹೆಮ್ಮೆ, ಕೊಡವರ ಕಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಕಂಚಿನ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾಗಿದ್ದು, ಇಡೀ ರಾಜ್ಯಕ್ಕೇ ಹೆಮ್ಮೆ ತಂದಿದೆ. ತಮಿಳುನಾಡಿನ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕ್ಯಾಡೆಮಿಯಲ್ಲಿ ಕಾರಿಯಪ್ಪನವರ ಆಳುದ್ದದ ಕಂಚಿನ ಪ್ರತಿಮೆಯನ್ನು ಇಂದು ಉದ್ಘಾಟಿಸಲಾಗಿದೆ. ದೇಶದ ಪ್ರಥಮ ಕಮಾಂಡರ್ ಇನ್ ಚೀಫ್ ಆಫ್ ಇಂಡಿಯನ್ ಆರ್ಮಿ ಎಂಬ ಹೆಗ್ಗಳಿಕೆ ಹೊಂದಿರೋ ಕಾರಿಯಪ್ಪನವರ ಕಂಚಿನ ಪ್ರತಿಮೆಯನ್ನು, ನಿವೃತ್ತ ಏರ್ ಮಾರ್ಷಲ್ ಹಾಗೂ ಮಾರ್ಷಲ್ ಕೆ.ಎಂ ಕಾರಿಯಪ್ಪನವರ ಪುತ್ರ ಕೆ.ಸಿ ಕಾರಿಯಪ್ಪ, ನಿವೃತ್ತ ಮೇಜರ್ ಜನರಲ್ ಟಿ.ಕೆ ಕೌಲ್ ಹಾಗೂ ಮೇಜರ್ ಜನರಲ್ ವಿ.ಡಿ ಚೌಗುಲೆ ಅನಾವರಣ ಗೊಳಿಸಿದ್ರು. ಈ ವೇಳೆ ಸಂಬಂಧಿತ ಅಧಿಕಾರಿಗಳ ಕುಟುಂಬ ವರ್ಗ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv