ಪ್ರಧಾನಿ ಮೋದಿ ಆದಷ್ಟು ಬೇಗ ಕಪ್ಪುಹಣ ತರುವ ಕೆಲಸ ಮಾಡಲಿ: ಪೇಜಾವರ ಶ್ರೀ

ರಾಯಚೂರು: ನಾಲ್ಕು ವರ್ಷಗಳು ಕಳೆದರೂ ಹೇಳಿದಂತೆ ವಿದೇಶದಿಂದ ಕಪ್ಪುಹಣ ತಂದಿಲ್ಲ. ಆದಷ್ಟು ಬೇಗ ಕಪ್ಪು ಹಣ ತರುವ ಕೆಲಸ ಪ್ರಧಾನಿ ಮೋದಿ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಮಂತ್ರಾಲಯ ಮಠದ ಚಂದ್ರಿಕಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಅಧಿಕಾರಕ್ಕೆ ಬಂದ ನಂತರ ಶ್ರೀಮಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಲೋಕಸಭೆ ಚುನಾವಣೆಗೆ ಒಂದು ವರ್ಷ ಸಮಯ ಇದೆ. ಮೋದಿ ಇನ್ನೂ ಜನಪರ ಕೆಲಸ ಮಾಡುವುದು ಬಾಕಿ ಇದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಮಠದಲ್ಲಿ ಇಫ್ತಿಯಾರ್ ಕೂಟದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೇ ತಿಂಗಳು 13 ಅಥವಾ 14ರಂದು ಇಫ್ತಿಯಾರ್​​​​ ಕೂಟ ಆಯೋಜನೆಗೆ ವಿಚಾರ ಮಾಡುತ್ತಿದ್ದೇವೆ. ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೇ ಇಫ್ತಿಯಾರ ಕೂಟ ವಿರೋಧಕ್ಕೆ ನಾನು ಮಹತ್ವ ಕೊಡುವುದಿಲ್ಲ. ಎರಡು ಪಂಗಡಗಳ ಮಧ್ಯೆ ಸೌಹಾರ್ದತೆಗೆ ಒತ್ತು ಕೊಡುತ್ತೇನೆ. ಹಾಗಾಗಿ ಕೂಟ ಮಾಡುತ್ತೇನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv