ಬೇರೆ ಭರವಸೆ ಕೊಡುವ ಮೊದಲು ರೈತರ ಸಾಲ ಮನ್ನ ಮಾಡಲಿ: ಪ್ರತಾಪ ಸಿಂಹ

ದಾವಣಗೆರೆ: ಈ ಹಿಂದೆ ಚುಣಾವನೆ ಸಂದರ್ಭದಲ್ಲಿ ರೈತರ ಸಂಪೂರ್ಣ ಸಲಮನ್ನಾ ಮಾಡ್ತೀವಿ ಅಂತ ಹೇಳಿದ್ರು. ಈಗ ಅದನ್ನು ಸರಿಯಾಗಿ ಈಡೇರಿಸುತ್ತಿಲ್ಲ. ಮೊದಲು ರೈತರ ಭರವಸೆ ಈಡೇರಿಸಿ. ಅದನ್ನೇ ಈಡೇರಿಸದಿದ್ರೆ ಬೇರೆ ಎಷ್ಟೇ ಭರವಸೆ ಕೊಟ್ರು ಅದಕ್ಕೆ ಮಹತ್ವ ಇರೊದಿಲ್ಲ ಎಂದು ದಾವಣಗೆರೆಯಲ್ಲಿ ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ ನೀಡಿದ್ರು. ಇನ್ನು ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಜನರಿಂದ ತಿರಸ್ಕಾರಗೊಂಡ ಪಕ್ಷಗಳು. ಈ ಎರಡು ಪಕ್ಷಗಳು ಪರಸ್ಪರ ಹೀಗಳೆಯುತ್ತಿವೆ. ಈ ಹಿಂದೆ ಅವರಪ್ಪನ ಆಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಈಗ 37 ಶಾಸಕರ ಸಂಖ್ಯೆ ಇರುವ ಪಕ್ಷದವರನ್ನು ಕರೆದು ಸಿಎಂ ಮಾಡಿದ್ದಾರೆ. ಇದು ಸರಿಯಾದರೆ ಇವರನ್ನ ಬೀಳಿಸಿ ನಮ್ಮ ಸರ್ಕಾರ ಮಾಡುವ ಹಕ್ಕು ಕೂಡ ನಮಗೆ ಇದೆ ಎಂದರು.

ಅಲ್ಲದೇ, ವಿಪಕ್ಷ ನಾಯಕ ಯಡಿಯೂರಪ್ಪನವರ ಇನ್ನೊಂದು ಆಡಿಯೋ ಬಿಡುಗಡೆ ಮಾಡಲಿರುವ ಕುರಿತು ಮಾತನಾಡಿದ ಅವರು, ಇಂಥ ಸಿಡಿ, ಆಡಿಯೋಗಳನ್ನ ಬಹಳಷ್ಟು ಬಿಡುತ್ತಿರುತ್ತಾರೆ. ಮಾಜಿ ಸಚಿವ ಎಚ್ ಆಂಜನೇಯ ಪತ್ನಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ರು. ಆಗ ಎಚ್ ಆಂಜನೇಯಯವರನ್ನು ಕ್ಯಾಬಿನಟ್ ನಿಂದ ಕೈ ಬಿಟ್ಟಿದ್ರಾ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ರು. ಅಲ್ಲದೇ, ಜನ ಆದೇಶ ಕೊಟ್ಟಿದ್ದು ಭಾರತೀಯ ಜನತಾ ಪಕ್ಷಕ್ಕೆ. ಇವರು ಗೌರವಯುತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾದವರು. ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಸಿಡಿ ಆಡಿಯೋ ಬಿಡುಗಡೆ ಮಾಡ್ತಿವಿ ಅಂತ ಹದರಿಸೊದು ಬಿಡಬೇಕು. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು.ಇದಕ್ಕೆ ಯಾರು ಯಾರು ಸಹಕಾರ ಕೊಡ್ತಾರೋ ಅವರಿಗೆಲ್ಲ ಸ್ವಾಗತ ಇದೆ ಎಂದು ದಾವಣಗೆರೆಯಲ್ಲಿ ಮಾತನಾಡಿದ್ರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv