ಚಿರತೆ ದಾಳಿಗೆ ಎರಡು ಮೇಕೆ ಬಲಿ

ಕೋಲಾರ: ಚಿರತೆ ದಾಳಿ ನಡಸಿ ಎರಡು ಮೇಕೆಗಳನ್ನು ತಿಂದು ಹಾಕಿರುವ ಘಟನೆ ಇಂದು ಬೆಳಗ್ಗೆ ಸೂಲೂರು ಗ್ರಾಮದಲ್ಲಿ ನಡೆದಿದೆ. ತೋಟದಲ್ಲಿ ಮೇಕೆಯನ್ನು ಮೇಯಿಸಲಾಗುತ್ತಿತ್ತು. ಈ ವೇಳೆ ಚಿರತೆ ದಾಳಿ ನಡೆಸಿ 2 ಮೇಕೆಗಳನ್ನು ತಿಂದು ಹಾಕಿದೆ. ರೈತ ನಾರಾಯಣಸ್ವಾಮಿಗೆ ಸೇರಿದ್ದ ಮೇಕೆಗಳನ್ನು ಚಿರತೆ ತಿಂದು ಹಾಕಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv